ತಾಯಿ  ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.

ಹೈದರಾಬಾದ್(ಜು.18): ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದೆ. ಡ್ರಗ್ಸ್ ಕೇಸ್​ನಲ್ಲಿ ತೆಲುಗು ನಟ ರವಿತೇಜಾ ಸೇರಿದಂತೆ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಟ ತರುಣ್, ನಿರ್ದೇಶಕ ಪೂರಿ ಜಗನ್ನಾಥ್, ನಟಿಯರಾದ ಚಾರ್ಮಿ, ಮುಮೈತ್ ಖಾನ್​ಗೆ ಸೇರಿ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ತಿಂಗಳ 19 ರಿಂದ 27ರವರೆಗೂ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇತ್ತೀಚೆಗೆ ರವಿತೇಜಾ ತಮ್ಮ ಇದೇ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರು. ಆದ್ರೆ ಈ ರವಿತೇಜಾ ಸೇರಿ ಹಲವರಿಗೆ ನೋಟಿಸ್​ ನೀಡಿರೋದು ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ.

ಈ ನಡುವೆ ರವಿತೇಜ ಅವರ ತಾಯಿ ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.

ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರಿ ಪವಿತ್ರ ಪುರ್ ಸಹ ' ತಮ್ಮ ತಂದೆ ಹೆಸರು ತಳುಕುಹಾಕಿಕೊಂಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಮೂರ್ಖತನದ ವದಂತಿಗಳು. ಖ್ಯಾತವ್ಯಕ್ತಿ ಎಂಬ ಕಾರಣಕ್ಕೆ ತಮ್ಮ ತಂದೆಯ ಹೆಸರನ್ನು ಎಲ್ಲಡೆ ಎಳೆಯಲಾಗುತ್ತಿದೆ. ಈ ರೀತಿಯ ಪ್ರಕರಣಗಳಲ್ಲಿ ಸಿಲಿಕುಕೊಂಡು ಅವರು ತಮ್ಮ ಉಜ್ವಲ ಭವಿಷ್ಯ ಹಾಗೂ ಕುಟುಂಬದ ಸಂಬಂಧವನ್ನು ಹಾಳು ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದಾರೆ.