ಯುಪಿಎ ಸರ್ಕಾರದ ನಂತರ 11 ಹಗರಣಗಳ ಕುರಿತ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸಲಾಯಿತಾದರೂ, ಅದನ್ನು ತಿದ್ದುಪಡಿ ಮಾಡಿ, ಹಗರಣಗಳ ತೀವ್ರತೆಯನ್ನು ಕಡಿಮೆ ಮಾಡಲಾಗಿತ್ತು.

ನವದೆಹಲಿ(ಅ.05): ಕಾಮನ್‌'ವೆಲ್ತ್, 2ಜಿ, ಕಲ್ಲಿದ್ದಲು ಹಗರಣಗಳು ಯುಪಿಎ ಅವಧಿಯಲ್ಲಿ ಬೆಳಕಿಗೆ ಬಂದಿದ್ದವಾದರೂ, ಇನ್ನೂ 11 ಹಗರಣಗಳನ್ನು ಮುಚ್ಚಿಡಲಾಗಿತ್ತು ಎಂದು ಸಿಎಜಿ ಮಹಾನಿರ್ದೇಶಕರಾಗಿ ನಿವೃತ್ತರಾಗಿರುವ ಆರ್.ಬಿ. ಸಿನ್ಹಾ ಹೊಸ ಬಾಂಬ್ ಸಿಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುಪಿಎ ಕಾಲಾವಧಿಯಲ್ಲಿ ದೂರಸಂಪರ್ಕ ಇಲಾಖೆಗೆ ಸಂಬಂಧಿಸಿದ 11 ಹಗರಣಗಳ ಮಾಹಿತಿಯನ್ನು ಸಿಎಜಿ ಉನ್ನತಾಧಿಕಾರಿಗಳಿಗೆ ರವಾನಿಸಲಾಗಿತ್ತು. 2014ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ಯುಪಿಎ ಮೇಲೆ ಅದು ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ‘ಈಗ ಬಹಿರಂಗಪಡಿಸುವುದು ಸರಿಯಲ್ಲ’ ಎಂಬ ಭಾವನೆಯನ್ನು ತಮಗೆ ವ್ಯಕ್ತಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ ಎಂದು ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ.

ಯುಪಿಎ ಸರ್ಕಾರದ ನಂತರ 11 ಹಗರಣಗಳ ಕುರಿತ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸಲಾಯಿತಾದರೂ, ಅದನ್ನು ತಿದ್ದುಪಡಿ ಮಾಡಿ, ಹಗರಣಗಳ ತೀವ್ರತೆಯನ್ನು ಕಡಿಮೆ ಮಾಡಲಾಗಿತ್ತು. ಅಂದಿನ ಸಿಎಜಿ ಆಗಿದ್ದ ಶಶಿಕಾಂತ್ ಶರ್ಮಾ ಅವರ ಉತ್ತಮ ನಡವಳಿಕೆಯಿಂದ ಜನರು ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.