ಡಲ್ಲಾಸ್(ಆ.31)  ಡಲ್ಲಾಸ್ ನಗರದಲ್ಲಿ ಇಂದಿನಿಂದ ಮೂರು ದಿನ ಕಾಲ ಅಕ್ಕ ಸಮ್ಮೇಳನ ನಡೆಯಲಿದ್ದು ವೇದಿಕೆ ಸಿದ್ಧವಾಗಿದೆ. ಅಮೆರಿಕ ಕನ್ನಡ ಕೂಟಗಳ ಆಗರ [ಅಕ್ಕ] ಸಮ್ಮೇಳನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲು ಆಹ್ವಾನ ನೀಡಲಾಗಿತ್ತು. ಆದರೆ ಕುಮಾರಸ್ವಾಮಿ ಸಮ್ಮೇಳನಕ್ಕೆ ತೆರಳಿಲ್ಲ. ಅಲ್ಲಿನ ಕನ್ನಡಿಗರೊಂದಿಗೆ ಕುಮಾರಸ್ವಾಮಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಹೊಸ ಧ್ಯೇಯ ವಾಕ್ಯವನ್ನು ಕೂಡ ರೂಪಿಸಲಾಗಿದ್ದು, "ಅಕ್ಕರೆಯ ಹತ್ತರ ಸಾರ್ಥಕ ಹೊತ್ತು" ಎಂಬ ಘೋಷ ವಾಕ್ಯದಡಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ. ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್ ನಗರದಲ್ಲಿ ಈ ಬಾರಿ 10ನೇ ವಿಶ್ವ ಅಕ್ಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನಾಳೆ ಅಧಿಕೃತವಾಗಿ ಸಿಗಲಿದೆ.

ಅಕ್ಕ ಸಮ್ಮೇಳನಕ್ಕೆ ಹಣ ಬಿಡುಗಡೆ

ಇಂದು ಅಂದರೆ ಶುಕ್ರವಾರ ಗಣ್ಯರು ಮತ್ತು ಅಮೆರಿಕದ ವಿವಿಧೆಡೆ ನೆಲೆಸಿರುವ ಕನ್ನಡಿಗರು ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಡಲ್ಲಾಸ್ ನಗರದ ಶೆರಟನ್ ಕನ್ವೆನ್ ಷನ್ ಸೆಂಟರ್ ಸಿದ್ಧಗೊಂಡಿದ್ದು ಗಣ್ಯರ ಆಗಮನ ಎದುರು ನೋಡುತ್ತಿದೆ.

ರಾಜ್ಯದಿಂದ ಕಲಾವಿದರು ತೆರಳಿದ್ದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್, ಶಮಿತಾ ಮಲ್ನಾಡ್ ಸೇರಿದಂತೆ ಅನೇಕರು ಗಾನ ಸುಧೆ ಹರಿಸಲಿದ್ದಾರೆ. ಅಕ್ಕ ಸಮ್ಮೇಳನದ ನಿರಂತರ ಅಪ್ ಡೇಟ್ ಗಾಗಿ ಸುವರ್ಣ ನ್ಯೂಸ್ .ಕಾಂ ನೋಡುತ್ತಾ ಇರಿ.