Asianet Suvarna News Asianet Suvarna News

ಅಗ್ನಿ ಅವಘಡದ ವೇಳೆ 16 ಜೀವ ಉಳಿಸಿದ 10ರ ಬಾಲಕಿ

ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ 16 ವರ್ಷದ ಬಾಲಕಿಯೋರ್ವಳು ತೋರಿದ ಧೈರ್ಯ ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಬೆಂಕಿ ಅವಘಡದ ವೇಳೆ ಆಕೆ 16 ಜನರ ಜೀವ ಕಾಪಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

10 Year Old Saved 16 People
Author
Bengaluru, First Published Aug 23, 2018, 4:12 PM IST | Last Updated Sep 9, 2018, 9:21 PM IST

ಮುಂಬೈ: ಇಲ್ಲಿನ ಪರೇಲ್ ಪ್ರದೇಶದಲ್ಲಿರುವ ಹಿಂದ್ ಕ್ರಿಸ್ಟಲ್ ಟವರ್ ಎಂಬ ವಸತಿ ಸಂಕೀರ್ಣ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. 

ಬುಧವಾರ ಬೆಳಗ್ಗೆ 9 ರ ವೇಳೆಗೆ17 ಅಂತಸ್ತಿನ ಕಟ್ಟಡದ  12ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಬೆಂಕಿಯ ಕೆನ್ನಾಲಿಗೆಯಿಂದ ಸೃಷ್ಟಿಯಾದ ಹೊಗೆಯು ಕಟ್ಟಡದ ಮೆಟ್ಟಿಲುಗಳು ಹಾಗೂ ಹೊರ ಹೋಗುವ ಸ್ಥಳಗಳಲ್ಲೆಲ್ಲಾ ಹಬ್ಬಿಕೊಂಡಿತ್ತು. 

ಇದೇ ವೇಳೆ ಇದೇ ಕಟ್ಟದಲ್ಲಿ ವಾಸವಿದ್ದ 10 ವರ್ಷದ ಬಾಲಕಿ ಜೆನ್ ಸದಾವಾರ್ತೆ ದಿಟ್ಟತನ ಮೆರೆದಿದ್ದಾರೆ.  ಇದೇ ಕಟ್ಟಡದ 18ನೇ ಫ್ಲೋರ್ ನಲ್ಲಿ ಈಕೆಯ ಕುಟುಂಬ ವಾಸವಿತ್ತು. 

ಬೆಂಕಿ ಬೀಳುತ್ತಿದ್ದಂತೆ ಆಕೆ ಅಕ್ಕಪಕ್ಕದವರನ್ನು ಈ ಕಟ್ಟಡದ ನಿವಾಸಿಗಳನ್ನು ಎಚ್ಚರಿಸಿದ್ದಾಳೆ. ಅಲ್ಲದೇ 16 ಜನರನ್ನು ಅಪಾಯದಿಂದ ಪಾರು ಮಾಡಿದ್ದಾಳೆ.

ಅಲ್ಲದೇ ಆತಂಕಗೊಳ್ಳದಂತೆ ಧೈರ್ಯದ ಮಾತುಗಳನ್ನಾಡಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು ಇದೀಗ ಎಲ್ಲರಿಂದ ಆಕೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

 

Latest Videos
Follow Us:
Download App:
  • android
  • ios