Asianet Suvarna News Asianet Suvarna News

ಕ್ರಿಕೆಟ್ ಮತ್ತು ಹೋರಾಟ: ಶ್ರೀಶಾಂತ್ ಬಗ್ಗೆ ನೀವು ತಿಳಿದಿರಬೇಕಾದ 10 ವಿಷಯಗಳು

ಕ್ರಿಕೆಟ್ ಮತ್ತು ಹೋರಾಟ: ಶ್ರೀಶಾಂತ್ ಬಗ್ಗೆ ನೀವು ತಿಳಿದಿರಬೇಕಾದ 10 ವಿಷಯಗಳು

10 things to know about Sreesanth

1.      ಅಂತರಾಷ್ಟ್ರೀಯ ಕ್ರಿಕೆಟ್'ಗೆ 2005ರಲ್ಲಿ ಪಾದಾರ್ಪಣೆ ಮಾಡಿದ ಶ್ರೀಶಾಂತ್ ಆರಂಭದಲ್ಲಿ ಇನ್'ಸ್ವಿಂಗ್ ಹಾಗೂ ಔಟ್ ಸ್ವಿಂಗ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದ್ದರು.

2.      ಆದರೆ ನಂತರದ ದಿನಗಳಲ್ಲಿ ತಮ್ಮ ಬೌಲಿಂಗ್ ಮೊನಚನ್ನು ಕಳೆದುಕೊಂಡು ತಂಡದಿಂದಲೇ ಹೊರಬೀಳಬೇಕಾಯಿತು.

3.      2005ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಶ್ರೀಶಾಂತ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.

4.      ಈ ನಡುವೆ 2013ರಲ್ಲಿ ಆರನೇ ಐಪಿಎಲ್ ಸಂದರ್ಭದಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೀಶಾಂತ್ ಸ್ಪಾಟ್'ಪಿಕ್ಸಿಂಗ್ ಆರೋಪದಡಿ ಜೈಲು ಸೇರಬೇಕಾಯಿತು.

5.      ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ 27 ದಿನಗಳ ಜೈಲುವಾಸ ಅನುಭವಿಸಿದ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐಯು ಅಜೀವ ನಿಷೇಧ ಹೇರಿತು.

6.      ಶ್ರೀಶಾಂತ್ ಸ್ಪಾಟ್'ಪಿಕ್ಸಿಂಗ್'ನಲ್ಲಿ ಭಾಗಿಯಾಗಿರುವ ಕುರಿತಂತೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಲಭ್ಯವಿಲ್ಲ ಎಂದು 2015ರಲ್ಲಿ ಮೋಕಾ ಕಾಯ್ದೆಯಡಿ ದೆಹಲಿ ನ್ಯಾಯಲಯ ಕೇರಳ ವೇಗಿಗೆ ಕ್ಲೀನ್'ಚಿಟ್ ನೀಡಿತು.

7.      ಮಾರ್ಚ್ 2017ರಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧೆಬಯಸಿ ಶ್ರೀಶಾಂತ್ ಕೋರಿದ್ದ ನಿರಾಕ್ಷೇಪಣಾ ಪತ್ರ (ಎನ್‌'ಒಸಿ) ಬಿಸಿಸಿಐನಿಂದ ತಿರಸ್ಕೃತ.

8.      "ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ್ದರೂ ಕ್ರಿಕೆಟ್ ಮಂಡಳಿಯ ಆಂತರಿಕ ಸಮಿತಿ ಅದಕ್ಕೆ ಒಪ್ಪುವುದಿಲ್ಲ. ಮಂಡಳಿಯ ನಿಯಮಗಳನ್ನು ಉಲ್ಲಂಘಿಸುವವರನ್ನು ಸಹಿಸಿಕೊಳ್ಳಲು ಸಹಿಸಿಕೊಳ್ಳಲಾಗದು" ಎಂದು ಹೇಳಿದ್ದ ಬಿಸಿಸಿಐ.

9.      ಆಗಸ್ಟ್ 2017:  ಸ್ಪಾಟ್-ಪಿಕ್ಸಿಂಗ್ ಆರೋಪದಡಿ ಬಿಸಿಸಿಐ ಎಸ್. ಶ್ರೀಶಾಂತ್'ಗೆ  ವಿಧಿಸಿದ್ದ ಜೀವಾವಧಿ ನಿಷೇಧವನ್ನು ತೆರವುಗೊಳಿಸಿದ ಕೇರಳ ಉಚ್ಚ ನ್ಯಾಯಾಲಯ

10.   ಅಕ್ಟೋಬರ್ 2017: ನಿಷೇಧ ತೆರವುಗೊಳಿಸಿದ್ದನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ ಮೇಲ್ಮನವಿಯನ್ನು ಎತ್ತಿಹಿಡಿದ ಹೈಕೋರ್ಟ್. ಜೀವಾವಧಿ ನಿಷೇಧ ಪಮತ್ತೆ ಮುಂದುವರಿಕೆ.

Follow Us:
Download App:
  • android
  • ios