Asianet Suvarna News Asianet Suvarna News

ಪ್ರಾರ್ಥನೆಗೂ ಮೋದಿಗೂ ನಂಟಿಲ್ಲ : ಆರ್ಚ್ ಬಿಷಪ್

2019 ರ ಲೋಕಸಭಾ ಚುನಾವಣೆಗೂ ಮುನ್ನಾ ರಾಷ್ಟ್ರ ರಾಜಧಾನಿಯ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆ ಅಭಿಯಾನಕ್ಕೆ ಕರೆ ನೀಡಿರುವ ಪತ್ರವನ್ನು ದೆಹಲಿ ಆರ್ಚ್ ಬಿಷಪ್ ಅನಿಲ್ ಕೌಟೊ ಸಮರ್ಥಿಸಿಕೊಂಡಿದ್ದಾರೆ. ತಮ್ಮ ವಿನಂತಿಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೂ ಯಾವುದೇ ನಂಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

'Nothing to Do With Modi': Delhi Archbishop Defends Letter

ನವದೆಹಲಿ: 2019 ರ ಲೋಕಸಭಾ ಚುನಾವಣೆಗೂ ಮುನ್ನಾ ರಾಷ್ಟ್ರ ರಾಜಧಾನಿಯ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆ ಅಭಿಯಾನಕ್ಕೆ ಕರೆ ನೀಡಿರುವ ಪತ್ರವನ್ನು ದೆಹಲಿ ಆರ್ಚ್ ಬಿಷಪ್ ಅನಿಲ್ ಕೌಟೊ ಸಮರ್ಥಿಸಿಕೊಂಡಿದ್ದಾರೆ. ತಮ್ಮ ವಿನಂತಿಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೂ ಯಾವುದೇ ನಂಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

‘ದೇಶಕ್ಕಾಗಿ ಪ್ರಾರ್ಥಿಸುವುದು ಯಾವಾಗಲೂ ಇದ್ದೇ ಇರುತ್ತದೆ. ವಾರದಲ್ಲೊಂದು ದಿನ ಪ್ರಾರ್ಥನೆ ಸಲ್ಲಿಸಲು ನಾವು ನಮ್ಮ ಚರ್ಚ್‌ಗಳಿಗೆ ನಿರ್ದೇಶಿಸಿದ್ದೆವು. ಈ ಖಾಸಗಿ ವಿಷಯದಲ್ಲಿ ಯಾರೊಬ್ಬರೂ ಹಸ್ತಕ್ಷೇಪ ನಡೆಸುವಂತಿಲ್ಲ. ದೇಶಕ್ಕೆ ಮಾರಕ ವಿಷಯಗಳ ಬಗ್ಗೆ ಆತಂಕ ವಿದೆ,’ ಎಂದು ಕೌಟೊ ತಿಳಿಸಿದ್ದಾರೆ.

ಸಚಿವ ರಾಜನಾಥ್ ಆಕ್ಷೇಪ: ಧರ್ಮ ಅಥವಾ ಪಂಥದ ಆಧಾರದಲ್ಲಿ ಭಾರತ ತಾರ ತಮ್ಯ ಮಾಡುವುದಿಲ್ಲ. ಜತೆಗೆ ದೇಶದಲ್ಲಿ ಅಂತಹ ಯಾವುದೇ ವಿಷಯಗಳು ನಡೆಯಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಈ ದೇಶದ ಏಕತೆ, ಸಮಗ್ರತೆ ಮತ್ತು ಪರಮಾಧಿಕಾರದ ವಿಚಾರದಲ್ಲಿ ರಾಜಿ ಇಲ್ಲ ಎಂದಿದ್ದಾರೆ. 

ಮೋದಿ ಸರ್ಕಾರದ ವಿರುದ್ಧ ದಿಲ್ಲಿ ಕ್ರೈಸ್ತರ ಪ್ರಾರ್ಥನೆ

Follow Us:
Download App:
  • android
  • ios