Asianet Suvarna News Asianet Suvarna News

ಮೋದಿ ಸರ್ಕಾರದ ವಿರುದ್ಧ ದಿಲ್ಲಿ ಕ್ರೈಸ್ತರ ಪ್ರಾರ್ಥನೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕ್ರೈಸ್ತರು ದೆಹಲಿಯಲ್ಲಿ ಪರೋಕ್ಷವಾಗಿ ಪ್ರಚಾರ ಆರಂಭಿಸಿದ್ದಾರೆ. ಭಾರತಕ್ಕೆ ಅಸ್ಥಿರ ರಾಜಕೀಯ ಭವಿಷ್ಯ ಎದುರಾಗಿದೆ.

Archbishop calls for a prayer campaign Against Modi govt

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕ್ರೈಸ್ತರು ದೆಹಲಿಯಲ್ಲಿ ಪರೋಕ್ಷವಾಗಿ ಪ್ರಚಾರ ಆರಂಭಿಸಿದ್ದಾರೆ. ಭಾರತಕ್ಕೆ ಅಸ್ಥಿರ ರಾಜಕೀಯ ಭವಿಷ್ಯ ಎದುರಾಗಿದೆ. ಅದರಿಂದ ದೇಶದ ಪ್ರಜಾ ಸತ್ತೆಗೇ ಅಪಾಯವಿದೆ ಎಂದು ಹೇಳಿರುವ ದೆಹಲಿಯ ಆರ್ಚ್‌ಬಿಷಪ್ ಅನಿಲ್ ಕೌಟೋ ಅವರು, ಲೋಕಸಭೆ ಚುನಾವಣೆವರೆಗೆ ಪ್ರಾರ್ಥನಾ ಆಂದೋಲನ ಹಾಗೂ ಶುಕ್ರವಾರದಂದು ಉಪವಾಸಗಳನ್ನು ಆರಂಭಿಸುವುದಾಗಿ ಪ್ರಕಟಿಸಿದ್ದಾರೆ.

ಮೇ 13 ರಂದುಬಿಷಪ್ ಅವರು ಪತ್ರವೊಂದನ್ನು ಓದಿದ್ದು, ಅದರಲ್ಲಿ ಈ ಅಂಶವಿದೆ.  2019 ರತ್ತನಾವು ನೋಟ ಹರಿಸಬೇಕು. ನಾವು ಹೊಸ ಸರ್ಕಾರ ಹೊಂದ ಬೇಕು. ದೇಶಕ್ಕಾಗಿ ಪ್ರಾರ್ಥನೆ ಆರಂಭಿಸಿ ಎಂದು ಬಿಷಪ್ ಅವರು ಕರೆ ನೀಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿ 2019 ರ ಮೇನಲ್ಲಿ ಪೂರ್ಣಗೊಳ್ಳಲಿದೆ.

ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಹಿಂದು ರಾಷ್ಟ್ರ ಸ್ಥಾಪಿಸುವ ಸಲುವಾಗಿ ಹಿಂದು ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಈ ಹಿಂದಿನಿಂದಲೂ ಕ್ರೈಸ್ತನಾಯಕರು ಆರೋಪಿಸಿಕೊಂಡು ಬಂದಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. 2017 ರಲ್ಲಿ ಕ್ರೈಸ್ತರ ಮೇಲೆ 736 ದಾಳಿಯಾಗಿವೆ ಎಂದು ದಾಖಲೆ ನೀಡುತ್ತಿ ದ್ದಾರೆ. ಇಂತಹ ಸಂದರ್ಭದಲ್ಲೇ ಸರ್ಕಾರದ ವಿರುದ್ಧ ಪ್ರಾರ್ಥನಾ ಸಭೆಗೆ ಕರೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಈ ಪ್ರಾರ್ಥನೆ ಯನ್ನು ದೇಶಾದ್ಯಂತ ನಡೆಸಬೇಕು ಎಂಬ ಬೇಡಿಕೆಯೂ ವ್ಯಕ್ತವಾಗತೊಡಗಿದೆ.

Follow Us:
Download App:
  • android
  • ios