ನಿತೀಶ್ ಕುಮಾರ್ ಅವರು ಬಿಜೆಪಿ ನೇತೃ ತ್ವದ ಎನ್‌ಡಿಎಯಿಂದ ಹೊರ ಬಂದಿದ್ದೇ ಆದಲ್ಲಿ, ಮಹಾಘಟ ಬಂಧನ್ (ಮಹಾ ಮೈತ್ರಿ) ಪುನಶ್ಚೇತನಗೊಳ್ಳಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿ ಸಿಂಗ್ ಗೋಯಿಲ್ ಅವರು ಪ್ರತಿಪಾದಿಸಿದ್ದಾರೆ. 

ನವದೆಹಲಿ: ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿ ಬಿಹಾರ ದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃ ತ್ವದ ಎನ್‌ಡಿಎಯಿಂದ ಹೊರ ಬಂದಿದ್ದೇ ಆದಲ್ಲಿ, ಮಹಾಘಟ ಬಂಧನ್ (ಮಹಾ ಮೈತ್ರಿ) ಪುನಶ್ಚೇತನಗೊಳ್ಳಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿ ಸಿಂಗ್ ಗೋಯಿಲ್ ಅವರು ಪ್ರತಿಪಾದಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019 ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಯು ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಉದ್ಭವವಾದ ಬೆನ್ನಲ್ಲೇ, ಬಿಹಾರ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಗೋಯಿಲ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ.