Asianet Suvarna News Asianet Suvarna News

ಸಮಯ 18:18, ದಿನಾಂಕ 18-8-18 ಈ ಕೂಸು ವರ್ಲ್ಡ್ ಫೇಮಸ್ಸು!

ಕಣ್ಣು ಬಿಟ್ಟಿದ್ದೇ ತಡ ವರ್ಲ್ಡ್ ಫೇಮಸ್ ಆದ ಲೂಸಿಯಾನಾ! ಲೂಸಿಯಾನಾ ಹುಟ್ಟಿದ್ದು 18-8-18 ರಂದು 18:18 ಸಮಯಕ್ಕೆ! ಲೂಸಿಯಾನಾಳ ಸಹೋದರಿಗೂ ಇದೀಗ 8 ವರ್ಷ! 18 ಅಮೆರಿಕನ್ನರ ಪಾಲಿಗೆ ವಿಶೇಷ ನಂಬರ್    


 

'Lucky' baby girl born at 18:18 on 8-18-18
Author
Bengaluru, First Published Aug 21, 2018, 12:41 PM IST

ಕೊಲೊರಾಡೋ(ಆ.21): ಈಗಷ್ಟೇ ಕಣ್ಣು ಬಿಟ್ಟು ತಾನೆಲ್ಲಿದ್ದೇನೆ ಎಂದು ನೋಡುತ್ತಿರುವ ಈ ಚೆಂದದ ಮಗು, ಹುಟ್ಟಿದ ಮರುಕ್ಷಣವೇ ವರ್ಲ್ಡ್ ಫೇಮಸ್ ಆಗಿದೆ.

ವಿಶ್ವ ವಿಖ್ಯಾತವಾಗಲು ಈ ಮಗು ಮಾಡಿದ್ದೇನು ಅಂತೀರಾ?. ಈ ಮುದ್ದಾದ ಹೆಣ್ಣು ಮಗುವಿನ ಹೆಸರು ಲೂಸಿಯಾನಾ ಕ್ಯಾಸ್ಟಿಲೋ ಅಂತಾ. ಈ ಮಗು ಕೊಲೊರಾಡೋದ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಆಗಸ್ಟ್ 18 ರಂದು ಜನಿಸಿದೆ. ಅಂದರೆ 18-8-18 ರಂದು. ಅಷ್ಟೇ ಅಲ್ಲ ಈ ಮಗು ಜನಿಸಿದ್ದು ಸಂಜೆ 6 ಗಂಟೆ 18 ನಿಮಿಷಕ್ಕೆ.

ಸೇನಾ ಸಮಯ ಯಾವಾಗಲೂ 24 ಗಂಟೆಯದ್ದಾಗಿರುವುದರಿಂದ ಇದನ್ನು 18:18 ಗಂಟೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಲುಸಿಯಾನಾ ಹುಟ್ಟಿದ್ದು 18-8-18 ರ 18:18 ರಂದು.

ಇನ್ನೊಂದು ವಿಶೇಷವೆಂದರೆ ಲೂಸಿಯಾನಾಳ ಸಹೋದರಿಗೆ ಇದೀಗ 8 ವರ್ಷ. ಅಮೆರಿಕನ್ನರಲ್ಲಿ 18 ತುಂಬ ಲಕ್ಕಿ ಎಂಬ ನಂಬಿಕೆ ಇದ್ದು, ಅದರಲ್ಲೂ ಆಗಸ್ಟ್ 18ನ್ನು ಮದುವೆ ಮತ್ತಿತರ ಶುಭ ಕಾರ್ಯಗಳಿಗಾಗಿ ಆಯ್ಕೆ ಮಾಡುವುದು ಪದ್ದತಿ.
 

Follow Us:
Download App:
  • android
  • ios