ಕೆಚ್ಚದೆಯ ಸ್ವಾತಂತ್ರ ಸೇನಾನಿ  ವಿವೇಕ ಸ್ಪೂರ್ತಿ ನೇತಾಜಿ ಕೀರ್ತಿ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ನಾಯಕರಲ್ಲಿ ಸುಭಾಷ್‌ ಚಂದ್ರ ಬೋಸ್ ಕೂಡ ಒಬ್ಬರು. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹೆಸರು ಕೇಳಿದರೆ ಬ್ರಿಟಿಷರು ನಡುಗುತ್ತಿದ್ದರು. ಅಂತಹ ಕೆಚ್ಚೆದೆಯ ಸ್ವಾತಂತ್ರ ಸೇನಾನಿಗೆ ಸ್ಪೂರ್ತಿಯಾಗಿದ್ದು, ಸ್ವಾಮಿ ವಿವೇಕಾನಂದರು. ವಿವೇಕಾನಂದರ ದೇಶದ ಬಗೆಗಿನ ದೂರಾದೃಷ್ಟಿ, ರಾಷ್ಟ್ರದ ಪುನರ್ನಿಮಾಣದ ಕುರಿತ ಉದಾತ್ತ ನಿಲುವಿನಿಂದ ಸುಭಾಷ್‌ ಪ್ರಭಾವಿತರಾಗಿದ್ದರು. ಇದೇ ಅವರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತ್ತು. ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದು ನೇತಾಜಿ ಸಾವಿರಾರು ಜನರಿಗೆ ಸ್ಪೂರ್ತಿ ತುಂಬಿದ್ದರು. ಅಂತಹ ಕೆಚ್ಚದೆಯ ಸ್ವಾತಂತ್ರ ಸೇನಾನಿಗೆ 125ನೇ ಜನ್ಮ ದಿನವಾಗಿದ್ದು, ಇಂದಿಗೂ ಭಾರತೀಯರ ಹೃದಯದಲ್ಲಿ ಅವರು ಅಜರಾಮರ. 
"