ನೆಟ್‌ಫ್ಲಿಕ್ಸ್‌ಗೆ ಸಡ್ಡು ಹೊಡೆಯಲು ಬಂದಿದೆ 'ನಮ್ಮ Flix'; ಕನ್ನಡ ಚಿತ್ರ ಬೆರಳ ತುದಿಯಲ್ಲಿ!

ಕನ್ನಡ ಸಿನಿ ಪ್ರೇಮಿಗಳನ್ನು ಮನೋರಂಜಿಸಲು ಬರುತ್ತಿದೆ ಹೊಸ OTT ಫ್ಲಾಟ್‌ಫಾರ್ಮ್‌ 'ನಮ್ಮ Flix'. ಇದು ರಿಯಲ್ ಸ್ಟಾರ್‌ ಉಪೇಂದ್ರ ಅವರ ಹೊಸ ಪ್ರಯೋಗ...

Namma felix new ott platform for Kannada movies launched by upendra

ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಅವರ 92ನೇ ಹುಟ್ಟು ಹಬ್ಬದ ಪ್ರಯುಕ್ತ ರಿಯಲ್‌ ಸ್ಟಾರ್ ಉಪೇಂದ್ರ 'ನಮ್ಮ Felix' ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದು ಕೇಲವ ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದು, ಅಮೇಜಾನ್ ಪ್ರೈಮ್‌ ಹಾಗೂ ನೆಟ್‌ಫ್ಲಿಕ್ಸ್‌ ರೀತಿ ಮನೆಯಲ್ಲಿಯೇ ಕುಳಿತುಕೊಂಡು, ಕನ್ನಡ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು. 

'ANVITON ENTERTAINMENT CORPORATION'ಅಡಿ ಅಲ್ಲಿ ನಿರ್ಮಾಣವಾದ 'ನಮ್ಮ FLIX' ಆ್ಯಪ್ ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್  ಒಟಿಟಿ ಫ್ಲಾಟ್ ಫಾರ್ಮ್.  ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಿದ್ದು, ಸುಮಾರು 200ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಹೊಂದಿದೆ. ಇದರಿಂದ ವೀಕ್ಷಕರಿಗೆ ಶೇ.100ರಷ್ಟು ಮನೋರಂಜನೆ ಗ್ಯಾರಂಟಿ ನೀಡಬಹುದು.

ಕಷ್ಟದಲ್ಲಿರೊ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು

ದಿನಕ್ಕೊಂದು ರುಪಾಯಿ:
'ನಮ್ಮ Flix'ನಲ್ಲಿ ಅತೀ ಶ್ರೀಘ್ರದಲ್ಲಿಯೇ ವೆಬ್ ಸೀರೀಸ್, ಸಂಗೀತ, ನಮ್ಮ ಸ್ಟಾರ್‌ಗಳ ಮಾತುಗಳನ್ನು ನೋಡಬಹುದು. ಇಷ್ಟೆಲ್ಲಾ ಮನೋರಂಜನೆ ಸಿಗುವ 'ನಮ್ಮ FLIX' ಆ್ಯಪ್ ದಿನಕ್ಕೆ ಒಂದು ರೂಪಾಯಿ ಮಾತ್ರ. ಸದ್ಯಕ್ಕೆ ಎಲ್ಲಾ ಆ್ಯಂಡ್ಯಾಯ್ಡ್ ಮೊಬೈಲ್‌ಗಳಲ್ಲೂ ಲಭ್ಯವಿದ್ದು, ಶೀಘ್ರದಲ್ಲಿ ಅಮೇಜಾನ್‌ ಫೈಯರ್‌ ಟಿವಿ, ಜಿಯೋ ಟಿವಿ ಮತ್ತು ಐ ಫೋನ್‌ಗಳಿಗೂ ಲಭ್ಯವಾಗಲಿದೆ.

ಕೊರೋನಾ ವೈರಸ್‌ ಹಬ್ಬುತ್ತಿರುವ ಭೀತಿ ಹಿನ್ನೆಲಯ್ಲಲಿ ಮನೆಯಲ್ಲಿ ಲಾಕ್‌ಡೌನ್‌ ಆಗಿರುವ ಜನರು ಒಟಿಟಿನಲ್ಲಿ ಸಿನಿಮಾಗಳನ್ನು ನೋಡುವ ಮೂಲಕ ಟೈಂ ಪಾಸ್‌ ಮಾಡುತ್ತಿದ್ದಾರೆ. ಕೆಲವರು ವೆಬ್‌ ಸೀರಿಸ್‌ಗಳಿಗೆ ಅಡಿಕ್ಟ್ ಆಗಿದ್ದಾರೆ. ಇನ್ನು ಕೆಲವರು ಇತ್ತೀಚಿಗೆ ರಿಲೀಸ್‌ ಆದ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅನೇಕ ಸಿನಿಮಾ ಮಂದಿರಗಳಲ್ಲಿ ಮೆಚ್ಚುಗೆ ಪಡೆದುಕೊಳ್ಳದಿದ್ದರೂ, ಆನ್‌ಲೈನ್‌ನಲ್ಲಿ 'ದಿಯಾ' ಹಾಗೂ 'ಲವ್ ಮಾಕ್ಟೈಲ್'ನಂಥ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿವೆ. 'ನಮ್ಮ ಫ್ಲಿಕ್' ಹೆಚ್ಚು ವೀಕ್ಷಕರನ್ನು ಪಡೆದುಕೊಂಡು ಸದಾ ಮನೋರಂಜಿಸುತ್ತಿರಲಿ ಎಂಬುವುದು ಕನ್ನಡಿಗರ ಆಶಯ.

ಏನಿದು OTT? 
ಕೇಬಲ್ ಬಾಕ್ಸ್ ಮೇಲಿಡುವ ಸಾಧನ 'Over' ಎಂದರ್ಥದಲ್ಲಿ ಓವರ್ ದಿ ಟಾಪ್ (OTT) ಎನ್ನುವ ಪದ ಬಳಸಲಾಗುತ್ತದೆ. ಆದರೆ, ಇಂಟರ್ನೆಟ್ ಮೂಲಕವೇ ಸಂಪರ್ಕ ಕಲ್ಪಿಸಿ, ಈ ಸೇವೆ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಹಾಗೂ ಬ್ರಾಡ್‌ಕಾಸ್ಚ್ ಪ್ರೊವೈಡರ್‌ಗಿಂತ ಈ ಸೇವೆಯನ್ನು ವಿಭಿನ್ನವಾಗಿ ನೀಡಲಾಗುತ್ತದೆ. 

ಕೊರೋನಾ ಲಾಕ್‌ಡೌನ್‌ನಿಂದ ಕೃಷಿಕನಾದ ರಿಯಲ್‌ ಸ್ಟಾರ್‌ ಉಪೇಂದ್ರ!

ಒಟ್ಟಿನಲ್ಲಿ ಗ್ರಾಹಕರಿಗೆ ಪ್ರತ್ಯೇಕವಾಗಿ ನೀಡುವ ವೀಡಿಯೋ ಸೇವೆ ಒಟಿಟಿ. ಮೊಬೈಲ್, ಕಂಪ್ಯೂಟರ್, ಮೊಬೈಲ್ಸ್, ಟಿವಿ, ಒಟಿಟಿ ಸಾಧನಗಳ ಮೂಲಕ ಇದರ ಸೇವೆ ಪಡೆಯಬಹುದು. ಅಲ್ಲದೇ ಇದೀಗ ಸ್ಮಾರ್ಟ್ ಟಿವಿ, ಆ್ಯಪಲ್ ಟಿವಿ, ಕ್ರೋಮ್‌ಕಾಸ್ಟ್, ಪ್ಲೇಸ್ಟೇಷನ್, ಎಕ್ಸ್ ಬಾಕ್ಸ್ ಅಮೇಜಾನ್ ಫೈರಿ ಸ್ಟಿಕ್ಸ್ ಹಾಗೂ ಇತರೆ ಸ್ಟ್ರೀಮಿಂಗ್ ಸಾಧನಗಳ ಮೂಲಕವೂ ಒಟಿಟಿ ಸೇವೆಗಳನ್ನು ಪಡೆಯಬಹುದಾಗಿದೆ. 

ಸಂಪ್ರದಾಯಿಕ ಟಿವಿ, ಸಿದ್ದು, ಮನೋರಂಜನೆಗಿಂತಲೂ ಜನರು ಈಗೀಗ ಈ ಫ್ಲ್ಯಾಟ್‌ಫಾರ್ಮ್ ಕಡೆ  ಹೆಚ್ಚು ಆಕರ್ಷಿತರಾಗುತ್ತಿದ್ದು, ಶೀಘ್ರದಲ್ಲಿಯೇ ಒಟಿಟಿ ಜಮಾನಾವೇ ಆರಂಭವಾಗುವುದರಲ್ಲಿ ಅನುಮಾನವೇ ಇಲ್ಲ. 

Latest Videos
Follow Us:
Download App:
  • android
  • ios