ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ಬಳಿಕ ಮತ್ತೊಂದು ಬಾಲಿವುಡ್‌ ಜೋಡಿ ಪ್ರಗ್ನೆನ್ಸಿ ನ್ಯೂಸ್‌ ಪೋಸ್ಟ್‌ ಮಾಡಿದೆ. ಇನ್ಸ್‌ಟಾಗ್ರಾಮ್‌ ಮೂಲಕ ಈ ಸುದ್ದಿಯನ್ನು ತಿಳಿಸಿದ್ದು, ನಿಮ್ಮ ಆಶೀರ್ವಾದ ಇರಲಿ ಎಂದು ಪೋಸ್ಟ್‌ ಮಾಡಿದ್ದಾರೆ.

ಮುಂಬೈ (ಫೆ.18): ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಡೇವಿಡ್‌ ಧವನ್‌ ಅವರ ಪುತ್ರ ಹಾಗೂ ನಟ ವರುಣ್‌ ಧವನ್‌ ತಾವು ತಂದೆಯಾಗುತ್ತಿರುವುದಾಗಿ ಭಾನುವಾರ ಘೋಷಣೆ ಮಾಡಿದ್ದಾರೆ. ಅವರ ಪತ್ನಿ ನತಾಶಾ ದಲಾಲ್‌ ಗರ್ಭಿಯಾಗಿರುವ ಸುದ್ದಿಯನ್ನು ವರುಣ್‌ ಧವನ್‌ ಪ್ರಕಟಿಸಿದ್ದು, ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಣೆ ಮಾಡಿದ್ದಾರೆ. ಸ್ಟೂಡೆಂಟ್‌ ಆಫ್‌ ದಿ ಇಯರ್‌ ಹಾಗೂ ಬದ್ರೀನಾಥ್‌ ಕಿ ದುಲ್ಹನಿಯಾ ಚಿತ್ರಗಳಲ್ಲಿ ನಟಿಸಿರುವ ವರುಣ್‌ ಧವನ್‌, ನತಾಶಾ ಅವರೊಂದಿಗೆ ತಂದೆ ಆಗುವ ಜರ್ನಿಯನ್ನು ಸಂಭ್ರಮದಿಂದ ಅನುಭವಿಸಲಿದ್ದೇನೆ ಎಂದು ಹೇಳಿದ್ದಾರೆ. ನತಾಶಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ವರುಣ್‌ ಧವನ್‌, 'ನಾವು ಗರ್ಭಿಣಿಯರಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೀತಿ ನಮಗೆ ಅಗತ್ಯವಿದೆ' ಎಂದು ಬರೆದುಕೊಂಡಿದ್ದು, ನನ್ನ ಕುಟುಂಬ ನನ್ನ ಶಕ್ತಿ ಎನ್ನುವ ಹ್ಯಾಶ್‌ಟ್ಯಾಗ್‌ ಬಳಸಿದ್ದಾರೆ. ಈ ಸುದ್ದಿ ವರುಣ್‌ ಧವನ್ ಫ್ಯಾನ್ಸ್‌ ಅಚ್ಚರಿಗೆ ಕಾರಣವಾವಾಗಿದೆ. ಇನ್ಸ್‌ಟಾಗ್ರಾಮ್‌ನ ಅವರ ಪೋಸ್ಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್‌ ಕೂಡ ಮಾಡಿದ್ದಾರೆ.

ಇನ್ನೂ ಕೆಲವು ಅಭಿಮಾನಿಗಳು ನಿಮಗೆ ಹೆಣ್ಣು ಮಗುವೇ ಹುಟ್ಟಲಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ವರುಣ್‌ ಧವನ್‌ ತಮಗೆ ಮೊದಲು ಹೆಣ್ಣು ಮಗುವೇ ಬೇಕು ಎಂದು ಹೇಳಿದ್ದನ್ನೂ ಅವರು ನೆನಪಿಸಿದ್ದಾರೆ. ವರುಣ್‌ ಧವನ್‌ ತಮ್ಮ ಮುಂದಿನ ಚಿತ್ರವಾಗಿ 'ಬೇಬಿ ಜಾನ್‌' ಘೋಷಣೆ ಮಾಡಿದ್ದಾರೆ. ಜವಾನ್‌ ನಿರ್ದೇಶಕ ಅಟ್ಲಿ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಎ. ಕಾಲೀಶ್ವರನ್‌ ನಿರ್ದೇಶನದ ಬೇಬಿ ಜಾನ್‌, ಆಕ್ಷನ್‌ ಎಂಟರ್‌ ಟೇನರ್‌ ಆಗಿರಲಿದೆ ಎಂದು ವರುಣ್‌ ಹೇಳಿದ್ದಾರೆ.

ಬೇಬಿ ಜಾನ್‌ ಚಿತ್ರದಲ್ಲಿ ವರುಣ್‌ ಧವನ್‌ ಅಲ್ಲದೆ, ಕೀರ್ತಿ ಸುರೇಶ್‌ ಹಾಗೂ ವಾಮಿಕಾ ಗಾಬ್ಬಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಜಾಕಿ ಶ್ರಾಫ್‌ ಹಾಗೂ ರಾಜ್‌ಪಾಲ್‌ ಯಾದವ್‌ ಕೂಡ ಪೋಷಕ ಪಾತ್ರದಲ್ಲಿ ನಟಿಸಲಿದ್ದು, ದಕ್ಷಿಣದ ಪ್ರಖ್ಯಾತ ಸಂಗೀತ ನಿರ್ದೇಶಕ ಎಸ್‌.ಥಮನ್‌ ಸಂಗೀತ ನೀಡಲಿದ್ದಾರೆ. ಇದು ತಮಿಳಿನ ಥೆರಿ ಸಿನಿಮಾದ ರಿಮೇಕ್‌ ಆಗಿದೆ. ದಳಪತಿ ವಿಜಯ್‌ ಅವರ ಚಿತ್ರ ಜೀವನದ ಸೂಪರ್‌ ಹಿಟ್‌ ಚಿತ್ರವಾದ ಥೆರಿಯನ್ನು ಅಟ್ಲೀ ನಿರ್ದೇಶನ ಮಾಡಿದ್ದರು. ಇದರಲ್ಲಿ ವಿಜಯ್‌ ಪೊಲೀಸ್‌ ಅಧಿಕಾರಿಯೊಂದಿಗೆ ಬೇಕರಿ ಮಾಲೀಕನಾಗಿ ನಟಿಸಿದ್ದರು.

ಕೈಯಿಂದ ಶೂಸ್‌ ತೆಗೆದು ದೀಪ ಹಚ್ಚಿದ ವರುಣ್‌, ಫಾಲೋ ಮಾಡಿದ ಕರಣ್‌, ಉಫ್‌ ಜಾಹ್ನವಿ ಮಾಡಿದ್ದೇನು?

ಇನ್ನು ಭಾರತೀಯ ಅವತರಿಣಿಕೆಯಯಾದ ಸಿಟಡಾಲ್‌ನಲ್ಲೂ ವರುಣ್‌ ಧವನ್‌ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ ಹಾಗೂ ಡಿಕೆ ನಿರ್ದೇಶನದ ಈ ಸಿರೀಸ್‌ನಲ್ಲಿ ಸಮಂತಾ ರುಥ್‌ ಪ್ರಭು ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಸಿನಿಮಾ ಶೂಟಿಂಗ್​ ವೇಳೆ ಅವಘಡ: ಕಬ್ಬಿಣದ ರಾಡ್​ ಬಿದ್ದು ನಟ ವರುಣ್​ ಧವನ್​ ಆಸ್ಪತ್ರೆಗೆ ದಾಖಲು

View post on Instagram