ದಯಾಮರಣ ಕೋರಿ ಪ್ರಾಣ ಬಿಟ್ಟ ಖ್ಯಾತ ನಟಿ! ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದೇ ಸಿಂಧು ದುರಂತ ಸಾವು!
ಜೀವನದುದ್ದಕ್ಕೂ ಕಣ್ಣೀರಿನಲ್ಲಿಯೇ ಕೈತೊಳೆದ ತಮಿಳು ನಟಿ ಸಿಂಧು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಹಣಕ್ಕೆ ಪರದಾಡಿ ಕೊನೆಯುಸಿರೆಳೆದಿದ್ದಾರೆ.
ಬಣ್ಣದ ಲೋಕ ನೋಡುಗರಿಗೆ ತುಂಬಾ ಚೆನ್ನ. ಒಮ್ಮೆ ಈ ಸಿನಿ ಲೋಕದಲ್ಲಿ (Cine Indistry) ಯಶಸ್ಸು ಕೈಹಿಡಿದರೆ ಅದು ಎಷ್ಟು ಬೇಕಾದರೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ ವಿಶ್ವಖ್ಯಾತಿಯನ್ನೂ ಗಳಿಸುತ್ತದೆ. ಅದಕ್ಕಾಗಿಯೇ ಇಂಥ ಸ್ಥಾನಕ್ಕೇರಲು ನಟ-ನಟಿಯರು ಯಾವ ಚಾಲೆಂಜ್ ಆದರೂ ಸ್ವೀಕರಿಸಲು ತಯಾರಿರುತ್ತಾರೆ. ಆದರೆ ಎಲ್ಲರಿಗೂ ಅದೃಷ್ಟ ಒಲಿಯುವುದಿಲ್ಲ. ಒಂದೆರಡು ಚಿತ್ರಗಳಲ್ಲಿ ಯಶಸ್ವಿಯಾದರೂ ಕೊನೆಗೆ ಒಂದರ ಮೇಲೊಂದು ಚಿತ್ರ ತೋಪೆದ್ದು ಹೋದರೆ ಅವರ ಘೋರ ಜೀವನ ಯಾರಿಗೂ ಬೇಡ. ಅದರಲ್ಲಿಯೂ ಸಹ ಕಲಾವಿದರು, ಹಾಸ್ಯ ನಟರ ಬದುಕಂತೂ ಅತ್ಯಂತ ಶೋಚನೀಯ. ಸ್ಯಾಂಡಲ್ವುಡ್ ಸೇರಿದಂತೆ ಎಲ್ಲ ಕಡೆ ಹಿರಿಯ ಸಿನಿಮಾ ನಟರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಕೂಡ ಯಾರೂ ಬರದಂಥ ಸನ್ನಿವೇಶ ಎದುರಾಗಿರುವ ಹಲವು ಉದಾಹರಣೆಗಳಿವೆ. ಹಲವರು ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗಲೇ ಜೀವ ಬಿಡುವ ನಟ-ನಟಿಯರ ಉದಾಹರಣೆಗಳೂ ಇವೆ.
ಅಂಥದ್ದೇ ಸಾಲಿಗೆ ಸೇರಿದ್ದಾರೆ ತಮಿಳಿನ ಖ್ಯಾತ ನಟಿ ಸಿಂಧು (Sindhu). 2010 ರ ವಾಂತ ಬಾಲನ್ ಅವರ ಅಂಗಡಿ ತೇರು ಚಿತ್ರದ ಮೂಲಕ ಮನೆಮಾತಾಗಿರುವ ನಟಿ ಸಿಂಧು ಸ್ತನದ ಕ್ಯಾನ್ಸರ್ ವಿರುದ್ಧ ಸುದೀರ್ಘ ಹೋರಾಡಿದ ಬಳಿಕ ಇಂದು ಕೊನೆಯುಸಿರೆಳೆದಿದ್ದಾರೆ. ಮಧ್ಯರಾತ್ರಿ, 2 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ನಟಿ 2020 ರಲ್ಲಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಮತ್ತು ಹಲವಾರು ಚಿಕಿತ್ಸೆಗಳೊಂದಿಗೆ ಸುದೀರ್ಘ ಹೋರಾಟವನ್ನು ನಡೆಸಿದರು. ಕೊನೆಗೆ ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾಧ್ಯವಾಗದೇ ಇಹಲೋಕ ತ್ಯಜಿಸಿದ್ದಾರೆ. ಸಿಂಧು ಅವರು 2020ರಿಂದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕಿಲ್ಪಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಹಿಂದಿ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಕೋರಿದ್ದರು. ಕಾರ್ತಿ, ಇಸರಿ ಗಣೇಶ್, ಸತೀಶ್ ಕುಮಾರ್ ಮುಂತಾದ ನಟರು ಆಕೆಯ ಆಸ್ಪತ್ರೆ ವೆಚ್ಚಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದರೂ ಇನ್ನೂ ಅವರಿಗೆ ಹಣದ ಅಗತ್ಯವಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಕೂಡ ಅವರು ತಮ್ಮ ಸ್ತನ ಕ್ಯಾನ್ಸರ್ ಬಗ್ಗೆ ಹಂಚಿಕೊಂಡು ಕಣ್ಣೀರು ಹಾಕಿದ್ದರು. ವೈದ್ಯರು ಆಕೆಯ ಒಂದು ಸ್ತನವನ್ನು ಕತ್ತರಿಸಿದ್ದಾರೆ ಎಂದು ಅವರು ಹೇಳಿದ್ದರು. ಅಂತಹ ನೋವು ಮತ್ತು ಸಂಕಟದಿಂದ ಬದುಕಲು ನಾನು ಬಯಸುವುದಿಲ್ಲ ಎಂದೂ ನಟಿ ನೋವಿನಿಂದ ನುಡಿದಿದ್ದರು. ದಯಾ ಮರಣ ನೀಡುವಂತೆಯೂ ವಿನಂತಿಸಿದ್ದರು.
Spandana Passed Away: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ಸಾವು ಕಣ್ಣೆದುರೇ ಇದ್ದಾಗ ಅದೇನೇ ನೋವಿದ್ದರೂ ಅರೆಕ್ಷಣ ಸಾಯುವ ಬಯಕೆಯಾದರೂ, ಬದುಕುವ ಆಸೆಯೂ ಬಂದುಬಿಡುತ್ತದೆ. ಅದೇ ರೀತಿ ನಟಿ ಸಿಂಧು ಅವರಿಗೂ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ (Social Media) ಬಂದು ತಮಗೆ ಆರ್ಥಿಕ ಸಹಾಯ ಮಾಡುವಂತೆ ಅಂಗಲಾಚಿದ್ದರೆ ಬಣ್ಣದ ಲೋಕದ ಇನ್ನೊಂದು ಮುಖದ ಅರಿವು ಕೂಡ ಆಗುತ್ತದೆ. ಅಂದಹಾಗೆ ಸಿಂಧು ಬಾಲ ಕಲಾವಿದೆಯಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ಮನೆಯಲ್ಲಿ ಬಡತನವಿದ್ದುದರಿಂದ ಚಲನಚಿತ್ರಗಳಲ್ಲಿ ನಟಿಸುವ ಅನಿವಾರ್ಯತೆ ಅವರಿಗೆ ಇತ್ತು. ಸಿಂಧು ಅವರು ತಮ್ಮ 14 ನೇ ವಯಸ್ಸಿನಲ್ಲಿ ಮದುವೆಯಾಗಿದ ಮಗುವಿಗೆ ತಾಯಿಯಾಗಿದ್ದರು. ಅವರ ವೈವಾಹಿಕ ಜೀವನದ ಕೂಡ ನೋವಿನಿಂದಲೇ ಕೂಡಿತ್ತು. ಪತಿ ಹಿಂಸೆ ನೀಡುತ್ತಿದ್ದರು. ಆದ್ದರಿಂದ ಸಿಂಧು ಅವರು ಮಗುವನ್ನು ಬೆಳೆಸಲು ಸಾಕಷ್ಟು ಹೆಣಗಾಡಿದ್ದರು.
2010 ರ ಚಲನಚಿತ್ರದಲ್ಲಿ, ವಸಂತಪಾಲನ್ ನಿರ್ದೇಶನದ ಅಂಗಡಿ ತೇರು, ಮಹೇಶ್ ಮತ್ತು ಅಂಜಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರೆ, ನಟಿ ಸಿಂಧು ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಅಂಗಡಿ ತೇರು ಬಳಿಕ ನಾಡೋಡಿಗಳು, ನಾನ್ ಮಹಾನ್ ಅಲ, ತೇನವಟ್ಟು ಮತ್ತು ಕರುಪ್ಪುಸಾಮಿ ಕುತಗೈತರರ್ ಚಿತ್ರಗಳಲ್ಲಿ ಸಿಂಧು ಕಾಣಿಸಿಕೊಂಡಿದ್ದಾರೆ.
ಖ್ಯಾತ ನಟನಿಗೆ ಇದೆಂಥ ಸಾವು? ಭಿಕ್ಷೆ ಬೇಡುತ್ತ ಬೀದಿಯಲ್ಲಿಯೇ ಹೆಣವಾದ ಮೋಹನ್!