ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಸುಶ್ಮಿತಾ ಸೇನ್‌ ಭಾನುವಾರ ಟ್ವಿಟರ್‌ನಲ್ಲಿ ಆಸ್ಕ್‌ ಮಿ ಎನಿಥಿಂಗ್ ಅನ್ನೋ ಸೆಷನ್ ಇಡ್ಕೊಂಡಿದ್ರು. ಇದರಲ್ಲಿ ಇಂಟ್ರೆಸ್ಟಿಂಗ್ ಪ್ರಶ್ನೆಗಳೂ, ಉತ್ತರಗಳೂ ಇದ್ದವು.

ಇತ್ತೀಚೆಗೆ ನಟ ಸುಶಾಂತ್  ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಸುದ್ದಿಯಲ್ಲಿರುವ ಬಾಲಿವುಡ್ ನೆಪೊಟಿಸಂ ಬಗ್ಗೆ ಫ್ಯಾನ್ಸ್‌ ಸುಶ್ಮಿತಾ ಸೇನ್‌ಗೆ ಪ್ರಶ್ನೆ ಮಾಡಿದ್ದಾರೆ. ಬಾಲಿವುಡ್ ನೆಪೊಟಿಸಂನ್ನು ನೀವು ಹೇಗೆ ಗ್ಗೆದ್ದು ಬಂದಿರಿ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.

ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್..!

ಇದಕ್ಕೆ ಉತ್ತರಿಸಿದ ಸುಶ್ಮಿತಾ, ನನ್ನ ಪ್ರೇಕ್ಷಕರ ಕರೆ ಮಾತ್ರ ನನ್ನ ಗಮನವಿತ್ತು. ಅಂದರೆ ನಿಮ್ಮಿಂದಾಗಿಯೇ ನೆಪೊಟಿಸಂ ಗೆದ್ದು ಬಂದೆ. ನೀವು ನನ್ನನ್ನು ನಟಿಯಾಗಿ ನೋಡಲು ಇಷ್ಟಪಡುವವರೆಗೂ ನಾನು ನಟಿಸುತ್ತೇನೆ ಎಂದು ಅವರು ಉತ್ತರಿಸಿದ್ದಾರೆ.

ಬಾಲಿವುಡ್ ನೆಪೊಟಿಸಂ ಹಾಗೂ ಸ್ಟಾರ್ ಕಿಡ್ಸ್‌ ಕುರಿತ ಚರ್ಚೆ ನಡೆಯುತ್ತಲೇ ಇದೆ. ಬಾಲಿವುಡ್ ಪ್ರಿವಿಲೇಜ್ ಕ್ಲಬ್‌ ಸುಶಾಂತ್ ಅವರನ್ನು ದೂರವಿಟ್ಟಿತ್ತು, ಪ್ರಭಾವಶಾಲಿ ನಿರ್ಮಾಪಕರೂ, ಸ್ಟಾರ್‌ ಕಿಡ್‌ಗಳೇ ಹೈಲೈಟ್ ಆದರು ಎಂದು ಸುಶಾಂತ್ ಅಭಿಮಾನಿಗಳ ಆರೋಪ. ಸುಶಾಂತ್ ಆತ್ಮಹತ್ಯೆ ಪ್ರಕರಣ ತನಿಖೆ ನಡೆಯುತ್ತಿದ್ದು, ಈಗಾಗಲೇ 15 ಜನರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಕಾಯಿಲೆ, ಯಾತನೆ ಬಗ್ಗೆ ಬಾಯಿ ಬಿಟ್ಟ ಸುಶ್ಮಿತಾ ಸೇನ್‌!

1994ರಲ್ಲಿ ಸುಶ್ಮಿತಾ ಸೇನ್ ಮಿಸ್ ಇಂಡಿಯಾ ಆಗಿ ನಂತರ ಮಿಸ್ ಯೂನಿವರ್ಸ್ ಆಗಿ ಗೆದ್ದು ಬಂದರು. 1996ರಲ್ಲಿ ದಸ್ತಖ್ ಮೂಲಕ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮೇ ಹೂಂ ನಾ, ಮೇನೇ ಪ್ಯಾರ್ ಕ್ಯೂ ಕಿಯಾ, ಬೀವಿ ನಂ 1 ಸಿನಿಮಾದಲ್ಲಿ ನಟಿಸಿದರು.

2010ರಲ್ಲಿ ಕೊನೆಯ ಸಿನಿಮಾ ನೋ ಪ್ರಾಬ್ಲೆಂ ಮಾಡಿ, ನಂತರ 2015ರಲ್ಲಿ ಬೆಂಗಾಲಿ ಸಿನಿಮಾ ನಿರ್ಭಾಕ್‌ನಲ್ಲಿ ನಟಿಸಿ, ನಂತರ ವೆಬ್ ಸಿರೀಸ್ ಆರ್ಯ ಮೂಲಕ ಮತ್ತೊಮ್ಮೆ ನಟಿಸಿದ್ದರು.