ಮುಂಬೈ(ಜೂ.115): ಧೋನಿ ಪಾತ್ರಕ್ಕೆ ಜೀವ ತುಂಬಿದ್ದ ಖ್ಯಾತ ಬಾಲಿವುಡ್ ನಟ 34 ವರ್ಷದ ಸುಶಾಂತ್ ಸಿಂಗ್ ರಜಪೂರ್‌ ಸಾವನ್ನಪ್ಪಿದ್ದಾರೆ. ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಅವರು ಆತ್ಮಹತ್ಯೆಮಾಡಿಕೊಂಡಿದ್ದಾರೆಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇವೆಲ್ಲದರ ನಡುವೆ ಪೊಲೀಸರು ಸುಶಾಂತ್ ಗೆಳತಿ, ಹಾಗೂ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿಚಾರಣೆ ನಡೆಸುತ್ತಾರೆಂಬ ವಿಚಾರ ಬಯಲಾಗಿದೆ. ಹೀಗಿದ್ದರೂ ರಿಯಾ ಕಡೆಯಿಂದ ಸುಶಾಂತ್ ಸಾವಿನ ಕುರಿತಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಷ್ಟೇ ಅಲ್ಲದೇ, ಸುಶಾಂತ್ ಸಿಂಗ್ ಗೆಳೆಯ ಮಹೇಶ್ ಶೆಟ್ಟಿಯ ವಿಚಾರಣೆಯೂ ನಡೆಯಲಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಭಾನುವಾರ ಮೃತಪಟ್ಟಿದ್ದು, ಅವವರು ತಮ್ಮ ಬಾಂದ್ರಾದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಾತ್ರಿಯೇ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ನೇಣು ಬಿಗಿದ ಪರಿಣಾಮಮ ಸಾವನ್ನಪ್ಪಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಅವರ ದೇಹದ ಕೆಲ ಅಂಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯ ಸುಶಾಂತ್ ಮೃತದೇಹ ಕಪೂರ್ ಶವಾಗಾರದಲ್ಲಿದೆ. 

ಸುಶಾಂತ್ ಸಾವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು.