ಬೆಂಗಳೂರು[ಜೂ. 05]  ನಟಿ, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎಪಿಸೋಡ್ ಈ ವಾರ ಪ್ರಸಾರ ಆಗಲಿದೆ.

ಮಂಡ್ಯ ಲೋಕ ಸಮರದಲ್ಲಿ ಗೆಲುವಿನ ನಗೆ ಬೀರಿರುವ ಸುಮಲತಾ ಚಲನಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಹೆಸರು ಮಾಡಿದ್ದವರು. ಜತೆಗೆ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ.

 ಕನ್ನಡ ಮಾತ್ರವಲ್ಲದೆ ಮಲೆಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಮಲತಾ ಜೀವನ ಕತೆ ತೆರೆದುಕೊಳ್ಳಲಿದೆ. 

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಚಿರಂಜೀವಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸುಮಲತಾ ಅಭಿನಯಿಸಿದ್ದು ವಾಹಿನಿ ಸುಮಲತಾ ಎಪಿಸೋಡ್ ಮಾಹಿತಿ ನೀಡಿದೆ. ಇನ್ನೊಂದು ಎಪಿಸೋಡ್ ನಲ್ಲಿ ನಿರ್ದೇಶಕ ನಾಗಾಭರಣ ಅವರ ಜೀವನ ತೆರೆದುಕೊಳ್ಳಲಿದೆ.