ಬೆಂಗಳೂರು(ಮಾ.16): ದೇಶದಲ್ಲೀಗ ಲೋಕಸಭಾ ಚುನಾವಣಾ ಜ್ವರ ಆವರಿಸುತ್ತಿದೆ. ರಾಜಕೀಯ ಮುಖಂಡರು ಪ್ರಚಾರಕ್ಕಿಳಿದಿದ್ದರೆ, ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಯುದ್ಧವನ್ನೇ ಆರಂಭಿಸಿದ್ದಾರೆ. ಹೀಗಾಗಿ ಪ್ರತಿ ದಿನ ಒಂದಲ್ಲಾ ಒಬ್ಬ ರಾಜಕಾರಣಿ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫುಲ್ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ನನ್ನ ಭಯವೇಕೆ? JDSಗೆ ಸುಮಲತಾ ಪ್ರಶ್ನೆ!

ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಆಡಿಯೋ ಲಾಂಚ್ ವೇಳೆ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಇದೀಗ ಟ್ರೋಲ್ ಆಗಿದೆ. ಫೇಸ್‌ಬುಕ್, ವ್ಯಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಭರಾಟೆ ಜೋರಾಗಿದೆ.

ಇದನ್ನೂ ಓದಿ: ಗೌಡರ ಕುಟುಂಬದಲ್ಲಿ ಒಳಗೊಳಗೇ ಅಳುಕು : ಎದುರಾಗಿದೆ ಆತಂಕ

ಉಡುಪಿಯ ಕಾರ್ಕಳ ಸಮೀಪದಲ್ಲಿ ನಡೆದ ಯಕ್ಷಗಾನದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಸಂಭಾಷಣೆ ಅನುಕರಣೆ ಮಾಡಲಾಗಿದ್ದು ವೈರಲ್ ಆಗಿದೆ.  

"

"

"

"