Asianet Suvarna News Asianet Suvarna News

ನಟಿ ಸನ್ನಿ ಲಿಯೋನ್​ಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ: ಕೇರಳ ಹೈ ಕೋರ್ಟ್​

ವಂಚನೆ ಆರೋಪ ಎದುರಿಸುತ್ತಿರುವ ನಟಿ ಸನ್ನಿ ಲಿಯೋನ್ ಮತ್ತು ಅವರ ಪತಿ ವಿರುದ್ಧದ ವಿಚಾರಣೆಯನ್ನು ಕೇರಳ ಹೈಕೋರ್ಟ್​ ಇಂದು ನಡೆಸಿತು. ನ್ಯಾಯಮೂರ್ತಿಗಳು ಹೇಳಿದ್ದೇನು? 
 

She is being harassed unnecessarily Kerala High Court on cheating case against Sunny Leone
Author
First Published Mar 10, 2023, 12:05 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್  ( ಕರಣ್‌ಜೀತ್‌ ಕೌರ್‌ ವೋಹ್ರಾ) ಮತ್ತು ಇತರ ಇಬ್ಬರ ವಿರುದ್ಧ ಕೇರಳ ರಾಜ್ಯ ಪೊಲೀಸರು  ದಾಖಲಿಸಿರುವ ವಂಚನೆ ಪ್ರಕರಣದ ವಿಚಾರಣೆ ಸದ್ಯ ಕೇರಳ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಸನ್ನಿ ಲಿಯೋನ್‌ (Sunny Leone) ಆಕೆಯ ಪತಿ ಡೇನಿಯಲ್‌ ವೆಬೆರ್‌ ಹಾಗೂ ಅವರ ಸಿಬ್ಬಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಾಲ್ಕು ವರ್ಷಗಳ ಹಿಂದೆ ಕೋಳಿಕ್ಕೋಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಂಸ್ಥೆಯೊಂದರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಇವರೆ ಮೇಲಿದೆ. ಈ ಕುರಿತಾಗಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿದೆ. ಅದೇ ರೀತಿ  ಸನ್ನಿ ಲಿಯೋನ್‌ ತಮ್ಮ ವಿರುದ್ಧ ದಾಖಲಾಗಿರುವ ಕೇಸ್‌ ಅನ್ನು ವಜಾ ಮಾಡುವಂತೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯನ್ನೂ ಕೋರ್ಟ್​ ನಡೆಸುತ್ತಿದೆ. ಇದಾಗಲೇ ಕಳೆದ ನವೆಂಬರ್​ ತಿಂಗಳಿನಲ್ಲಿ ಕ್ರಿಮಿನಲ್‌ ಮೊಕದ್ದಮೆಗೆ ಕೇರಳ ಹೈಕೋರ್ಟ್‌ (Kerala High court) ತಡೆ ನೀಡಿತ್ತು.

ನಮ್ಮ ವಿರುದ್ಧ ಯಾವುದೇ ವಸ್ತುನಿಷ್ಠ ಅಥವಾ ಸ್ಪಷ್ಟ ಸಾಕ್ಷಿಗಳು ಕಂಡುಬಂದಿಲ್ಲದಿದ್ದರೂ, ತಮ್ಮ ವಿರುದ್ಧದ ದೀರ್ಘಾವಧಿಯ ಕಾರ್ಯಕ್ರಮದ ಆಯೋಜಕರಾದ ಎರ್ನಾಕುಲಂ ಜಿಲ್ಲೆಯ ಶಿಯಾಸ್ ಕುಂಜುಮೊಹಮ್ಮದ್ (Shiaz mohammed) ಎಂಬುವವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇರಳ ಮತ್ತು ವಿದೇಶಗಳಲ್ಲಿ ಸ್ಟೇಜ್ ಶೋಗಳನ್ನು ನೀಡಲು 39 ಲಕ್ಷ ರೂಪಾಯಿ ಪಡೆದಿದ್ದರೂ, ಸನ್ನಿ ಲಿಯೋನ್ ಮತ್ತು ಇತರರು ಈ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಅವರ ಮೇಲಿರುವ ಆರೋಪ. ಈ ವಿಚಾರಣೆಯ ಪ್ರಕ್ರಿಯೆಯಿಂದಾಗಿ ನಾವು ಹೇಳಲಾಗದ ದುಃಖಕ್ಕೆ ಒಳಗಾಗಿದ್ದೇವೆ ಮತ್ತು ತುಂಬಲಾರದ ನಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಸನ್ನಿ ಕೋರ್ಟ್​ಗೆ ಹೇಳಿದ್ದರು.  ನಮ್ಮ ವಿರುದ್ಧ ಯಾವುದೇ ವಸ್ತುನಿಷ್ಠ ಅಥವಾ ಸ್ಪಷ್ಟ ಸಾಕ್ಷಿಗಳು ಇಲ್ಲ. ಇದರ ಹೊರತಾಗಿಯೂ ನಮ್ಮ ವಿರುದ್ಧದ ದೀರ್ಘಾವಧಿಯ ವಿಚಾರಣೆ ನಡೆಸಲಾಗುತ್ತಿದೆ. ಇದರಿಂದ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ ಎಂದು  ಹೇಳಿದ್ದಾರೆ.  

ಸನ್ನಿ ಲಿಯೋನ್ LinkedIn ಅಕೌಂಟ್ ಡಿಲೀಟ್; ಕಂಪನಿ ತಪ್ಪಿಗೆ ಕ್ಷಮೆ ಕೇಳಬೇಕು ಎಂದ ನಟಿ

ದೂರುದಾರರು ಹಾಕಿರುವ ಅರ್ಜಿಯಿಂದ ಅವರಿಗೆ ಯಾವುದೇ ನಷ್ಟವಾಗಿಲ್ಲ. ಆದರೆ, ಅವರು ಹಾಕಿರುವ ಅರ್ಜಿಯಿಂದ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸನ್ನಿ ಲಿಯೋನ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜುಲೈ 2022 ರಲ್ಲಿ ಮ್ಯಾಜಿಸ್ಟ್ರೇಟ್ (Magistrate) ನ್ಯಾಯಾಲಯವು ವಜಾಗೊಳಿಸಿದ ಅದೇ ಆರೋಪಗಳೊಂದಿಗೆ ದೂರುದಾರರು ಸಿವಿಲ್ ಮೊಕದ್ದಮೆಯನ್ನು ಸಹ ಸಲ್ಲಿಸಿದ್ದಾರೆ ಎಂದು ಮನವಿಯಲ್ಲಿ ಅವರು ಹೇಳಿದ್ದಾರೆ.  ಹೀಗಾಗಿ ತಮ್ಮ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಸನ್ನಿ ಲಿಯೋನ್‌ ಕೋರಿದ್ದರು

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ನೇತೃತ್ವದ ಪೀಠವು, ಸನ್ನಿ ಲಿಯೋನ್​ ಅವರು ಯಾವುದೇ ಅಪರಾಧವನ್ನು ಮಾಡದಿದ್ದರೂ ಅನಗತ್ಯವಾಗಿ ಅವರಿಗೆ  ಕಿರುಕುಳ ನೀಡುತ್ತಿರುವಂತೆ ಕಂಡುಬರುತ್ತಿದೆ ಎಂದು ಮೌಖಿಕವಾಗಿ ಹೇಳಿದೆ. ಇದನ್ನು ಗಮನಿಸಿದರೆ, ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್​ ಪ್ರಕರಣವನ್ನು ವಜಾಗೊಳಿಸಲು ನಾವು ಬಯಸಿದ್ದೇವೆ ಎಂದೂ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಹೇಳಿದ್ದಾರೆ. 'ಇದರಲ್ಲಿ ಕ್ರಿಮಿನಲ್ (Criminal case) ಅಪರಾಧವೇನು? ನೀವು  ಆರೋಪಿ ಸ್ಥಾನದಲ್ಲಿ ನಿಂತಿರುವ ಸನ್ನಿ ಲಿಯೋನ್ ಅವರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದೀರಿ ಎಂದು ಎನ್ನಿಸುತ್ತಿದೆ. ಇದನ್ನು ರದ್ದುಗೊಳಿಸಲು ನಾವು ಒಲವು ಹೊಂದಿದ್ದೇವೆ' ಎಂದುಕೋರ್ಟ್​ ಹೇಳಿದೆ.  ಸದ್ಯ ತನಿಖೆಯನ್ನು ಮುಂದುವರಿಸಬಹುದು ಎಂದು ಪೊಲೀಸರಿಗೆ ತಿಳಿಸಿದ ಕೋರ್ಟ್​, ವಿಚಾರಣೆಯನ್ನು  ಮಾರ್ಚ್ 31 ಕ್ಕೆ ಮುಂದೂಡಿದೆ.

ಒಂದು ಕಣ್ಣು ಕಾಣಿಸುವುದಿಲ್ಲವೆಂದ ರಾಣಾ, ಮದುವೆಯಾಗಿದ್ದು ಯಾವಾಗ ಎಂದೇ ಮರೆತಿದ್ದಾರಂತೆ ವೆಂಕಟೇಶ್!

Follow Us:
Download App:
  • android
  • ios