ಯುವರತ್ನ ಟೀಸರ್ ಬಿಡುಗಡೆಯಾಗಿದೆ. ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದು, ಸಂತೋಷ್ ಆನಂದ್​ರಾಮ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣುತ್ತಿದೆ.

1 ನಿಮಿಷ 40 ಸೆಕೆಂಡ್ ಗಳ ಟೀಸರ್ ಸುಮಾರು 5 ಲಕ್ಷ ವೀವ್ ಕಂಡಿದೆ. ದುನಿಯಾದಲ್ಲಿ ಮೂರು ತರಹದ ಗಂಡಸರಿರ್ತಾರೆ.. ರೂಲ್ಸ್ ಫಾಲೋ ಮಾಡೋರು.. ರೂಲ್ಸ್ ಬ್ರೇಕ್ ಮಾಡೋರು.. ಆದರೆ ನಾನು ರೂಲ್ ಮಾಡೋನು... ಖಡಕ್ ಡೈಲಾಗ್ ಗಳು ಮೈಮರೆಯುವಂತೆ ಮಾಡುತ್ತವೆ.

‘ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟ್ ನಲ್ಲಿ ಪುನೀತ್ ಬದಲು ರಚಿತಾ ರಾಮ್!

29ನೇ ನಂಬರ್ ಜರ್ಸಿ ತೊಟ್ಟ ಪವರ್ ಸ್ಟಾರ್ ಹೆಜ್ಜೆ ಹಾಕುತ್ತಾರೆ. ​ ಆಟ-ಓಟ ಹಾಗೂ ಹೊಡೆದಾಟದ ಜತೆಗೆ ಹೊಸ ಲುಕ್ ನಲ್ಲಿ ಪವರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಜತೆಗೆ ದಿಗಂತ್ , ನಟಿ ಸೋನು ಗೌಡ ಸಹ ಇದ್ದಾರೆ. ಕಾಲಿವುಡ್​ ನಟಿ ಸಯೇಶಾ ನಾಯಕಿಯಾಗಿ ಅಭಿನಯಿಸುತ್ತಿದ್ದು ಯಾವ ರೀತಿಯ ಕತೆ ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಇದೆ.

ಸೂಪರ್ ಹಿಟ್ 'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಕಾಲೇಜ್ ಸ್ಟುಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.