ಆರ್ಥಿಕ ಸಂಕಷ್ಟದಲ್ಲಿದ್ದಾರೆ ಸ್ಯಾಂಡಲ್‌ವುಡ್ ನಟ ನಟರಾಜ್ | ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ | ಸಹಾಯಕ್ಕಾಗಿ ಅಂಗಲಾಚಿದ್ದಾರೆ ನಟರಾಜ್ 

ಬೆಂಗಳೂರು (ಫೆ. 27): ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಸ್ಯಾಂಡಲ್ ವುಡ್ ನಟ ನಟರಾಜ್ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. 

ಪುಲ್ವಾಮ ದಾಳಿ: ಹುತಾತ್ಮ ಯೋಧರ ಕುಟುಂಬಗಳಿಗೆ ಲತಾ ಮಂಗೇಶ್ಕರ್ ನೆರವು

ವಿಷ್ಣುವರ್ಧನ್ ,ಅಂಬರೀಶ್ ,ಶಿವರಾಜ್ ಕುಮಾರ್ ,ದರ್ಶನ್,ಶರಣ್ ಸೇರಿದಂತೆ ಜೊತೆ ಸಾಕಷ್ಟು ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಏಕದಂತ ,ಸಂತ, ರಾಜರಾಜೇಂದ್ರ, ಕೋಲಾರ , ಜಠಾಯು, ವಿಕ್ಟರಿ - 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್

ನಟರಾಜ್ ರವರು ಸ್ಟ್ರೋಕ್ ನಿಂದ ಬಳಲುತ್ತಿದ್ದು ದುಡಿಯೋ ಶಕ್ತಿ ಇಲ್ಲದೇ ಸಹಾಯಕ್ಕೆ ಅಂಗಲಾಚಿದ್ದಾರೆ. ಆಸ್ಪತ್ರೆ ವೆಚ್ಚ ಭರಿಸಲು, ಮನೆ ಬಾಡಿಗೆ ಕಟ್ಟಲು ಹರಸಾಹಸಪಡುತ್ತಿದ್ದಾರೆ. 

ಸದ್ಯ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನಟರಾಜ್ ವಾಸವಾಗಿದ್ದಾರೆ. ಕಲಾವಿದರ ಸಂಘಕ್ಕೆ ಸಹಾಯ ಕೇಳಿದ್ರೆ ಮೆಂಬರ್ ಶಿಪ್ ಕಾರ್ಡ್ ಇಲ್ಲ ಅನ್ನುವ ನೆಪ ಹೇಳಲಾಗಿದೆ. ಅವಕಾಶ ಇಲ್ಲದೇ ಇದ್ದಾಗ ಡ್ರೈವಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರು.ಈಗ ಅದಕ್ಕೂ ಆಗದೇ ಪರದಾಡುತ್ತಿದ್ದಾರೆ. ಹೆಂಡತಿ ದುಡಿದು ಸಾಕುತ್ತಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೂ ಕಾಸಿಲ್ಲ ಅಂತ ನಟರಾಜ್ ಕಣ್ಣೀರು ಹಾಕಿದ್ದಾರೆ.