ನಿರ್ಮಾಪಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಇದೀಗ ನಟಿ ಸಮಂತಾ ಹಾಗೂ ನಿರ್ಮಾಪಕ ರಾಜ್‌ ನಿಡಿಮೋರು ಜೊತೆಯಲ್ಲಿ.. 

ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಜೊತೆ ನಟಿ ಸಮಂತಾ ತಿರುಪತಿ ದರ್ಶನ ಪಡೆದಿದ್ದಾರೆ. ನಟಿ ಸಮಂತಾ ಅವರ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಗಾಸಿಪ್ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ನಿರ್ಮಾಪಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದು ಗಾಸಿಪ್ ಎನ್ನಬಹುದು. ಆದರೆ, ಇದೀಗ ನಟಿ ಸಮಂತಾ ಹಾಗೂ ನಿರ್ಮಾಪಕ ರಾಜ್‌ ನಿಡಿಮೋರು ಜೊತೆಯಲ್ಲಿ ಓಡಾಡಿದ ವಿಡಿಯೋ ವೈರಲ್ ಆಗಿದೆ. ಇದೀಗ ಜಗತ್ತಿಗೆ ಹೇಳಲು ಹೊಸ ಸುದ್ದಿ ಸಿಕ್ಕಂತಾಗಿದೆ. 

ಸಾಮಾನ್ಯವಾಗಿ ತೀರಾ ಹತ್ತಿರದವರ ಜೊತೆಯಲ್ಲಿ ದೇವರ ಸನ್ನಿಧಿಗೆ ತೆರಳುತ್ತಾರೆ. ನೋಡಿದರೆ ನಟಿ ಸಮಂತಾ ಅವರು ರಾಜ್ ನಿಡಿಮೋರು ಜೊತೆ ತಿರುಪತಿಗೆ ಹೋಗಿದ್ದಾರೆ. ಪ್ರಸಿದ್ಧ ದೇವಸ್ಥಾನ ತಿರುಪತಿಗೆ ಸೆಲೆಬ್ರೆಟಿಗಳು ಹೋಗೋದೇನೂ ದೊಡ್ಡ ಸಂಗತಿಯೇನಲ್ಲ. ಅದರಲ್ಲೂ ನಟಿ ಸಮಂತಾ ಕೊಯಮುತ್ತೂರಿನ ಸದ್ಗುರು ಸನ್ನಿಧಿ ಸೇರಿದಂತೆ ಹೆಚ್ಚು ಹೆಚ್ಚು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಅವರಿಬ್ಬರ ಬಗ್ಗೆ ಗಾಸಿಪ್ ಹುಟ್ಟಿಕೊಮಡ ಸಮಯದಲ್ಲೆ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇದು ಸ್ಪೆಷಲ್ ಸಂಗತಿ!

'ಏಕ್ ಚುಮ್ಮಾ ದೇಗಿ ಕ್ಯಾ?' ಎಂದು ಕೇಳಿದ ಮುಂಬೈವಾಲಾಗೆ ಈ ಖ್ಯಾತ ನಟಿ 'ಕಿಸ್' ಕೊಟ್ರಾ?

ಹೌದು, ನಟಿ ಸಮಂತಾ ಹಾಗೂ ರಾಜ್ ನಿಡಿಮೋರು ಬಗ್ಗೆ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಆದರೆ,ಯಾವುದೇ ಕನ್ಪರ್ಮೇಶನ್ ಇರಲಿಲ್ಲ. ಆದರೆ, ಇಂದು ತಿರುಪತಿ ದೇವಾಲಯಕ್ಕೆ ಈ ಇಬ್ಬರೂ ಜೊತೆಯಲ್ಲೇ ಭೇಟಿ ನೀಡಿದ ಬಳಿಕ ಈ ಸುದ್ದಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ, ಇದು ಅಧೀಕೃತ ಎಂದು ಹೇಳಲು ಯಾವುದೇ ಸಾಕ್ಷಿ-ಪುರಾವೆ ಇಲ್ಲ. ಕಾರಣ, ತಾವಿಬ್ಬರೂ ರಿಲೀಶನ್‌ಶಿಪ್‌ನಲ್ಲಿ ಇದ್ಧೇವೆ ಎಂದು ಸಮಂತಾ ಆಗಲೀ ಅಥವಾ ರಾಜ್ ಆಗಲೀ ಎಲ್ಲೂ ಹೇಳಿಲ್ಲ. ಆದರೆ, ಜತೆಜತೆಯಾಗಿ ಓಡಾಡುತ್ತಿರುವುದು ಯಾಕೆ? ಅದು ಗೊತ್ತಿಲ್ಲ..!

ನಟಿ ಸಮಂತಾ ಹಾಗೂ ನಟ ನಾಗಚೈತ್ನ್ ಅಕ್ಕಿನೇನಿ ಲವ್ ಮಾಡಿ ಮದುವೆ ಆಗಿದ್ದು ಎಲ್ಲರಿಗೂ ಗೊತ್ತು. ಅದು ಗೊತ್ತಿಲ್ಲದವರಿಗೂ ಸಮಂತಾ-ನಾಗಚೈತನ್ಯ ಡಿವೋರ್ಸ್ ಪಡೆದಿದ್ದು ಗೊತ್ತು. ಬಳಿಕ, ನಾಗಚೈತನ್ಯ ಅವರು ಶೋಭಿತಾ ದುಲಿಪಾಲ ಜೊತೆ ಕಳೆದ ವರ್ಷ ಸಪ್ತಪದಿ ತುಳಿದು ಎರಡನೇ ಮದುವೆ ಆಗಿ ಹಾಯಾಗಿರೋದೂ ಗೊತ್ತು. ಈಗ ಸಮಂತಾ ಎರಡನೇ ಮದುವೆ ಸರದಿಯೇ? ಗೊತ್ತಿಲ್ಲ, ಇದ್ದರೂ ಇರಬಹುದು. ಈ ಪ್ರಶ್ನೆಗೆ ಸದ್ಯದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.. ಕಾದು ನೋಡಿ..!

ಯಾವತ್ತೂ ನನ್ ಏಜ್ ಹುಡುಗೀರು ಇಷ್ಟ ಆಗ್ತಾ ಇರ್ಲಿಲ್ಲ, ದೊಡ್ಡವ್ರೇ ಇಷ್ಟ ಆಗ್ತಿದ್ರು: ರಕ್ಷಿತ್ ಶೆಟ್ಟಿ!