ಗಣರಾಜ್ಯ ದಿನಕ್ಕೆ ದಕ್ಷಿಣ ಭಾರತದ ತಾರೆಗಳಿಂದ ವಿಶ್/ ರಾಕಿಂಗ್ ಸ್ಟಾರ್ ಯಶ್ ವಿಶ್ ಹೇಗಿತ್ತು?/ ಮಹೇಶ್ ಬಾಬು ಸಹ ಹಿಂದೆ ಬಿದ್ದಿಲ್ಲ
ಬೆಂಗಳೂರು(ಜ. 26) ಇಡೀ ದೇಶ 71 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದೆ. ಎಲ್ಲೆಲ್ಲಿಯೂ ದೇಶಭಕ್ತಿ ಕಂಪು ಪಸರಿಸಿದೆ. ದಕ್ಷಿಣ ಭಾತರದ ಸಿನಿಮಾ ತಾರೆಯರು ತಮ್ಮದೇ ಆದ ರೀತಿಯಲ್ಲಿ ಗಣತಂತ್ರ ದಿನದ ಶುಭಾಶಯ ಕೋರಿದ್ದಾರೆ.
ಸೈನಿಕರೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಇವರೊಂದಿಗೆ ಕಳೆದ ಸಮಯ ಸದಾ ನೆನಪಿನಲ್ಲಿ ಹಸಿರಾಗಿ ಇರುತ್ತದೆ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನ ಮೋದಿ ಮನದ ಮಾತು
ಮಹಾತ್ಮ ಗಾಂಧೀಜಿಯವರ ಹೇಳಿಕೆಯೊಂದರ ಮೂಲಕ ರಾಕಿಂಗ್ ಸ್ಟಾರ್ ಯಶ್ ಗಣರಾಜ್ಯೋತ್ಸವದ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಹೆಜ್ಜೆ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ.
ಇನ್ನುಳಿದಂತೆ ಕಾಜಲ್ ಅಗರ್ ವಾಲ್ ಸಹ ಶುಭಾಶಯ ಹಂಚಿಕೊಂಡಿದ್ದಾರೆ. ಹಾಗಾದರೆ ಯಾರು ಯಾವ ರೀತಿ ಶುಭಾಶಯ ಹೇಳಿದ್ದಾರೆ ನೋಡಿಕೊಂಡು ಬನ್ನಿ...
