ನವದೆಹಲಿ[ಡಿ.05]: ಸೋಶಿಯಲ್ ಮೀಡಿಯಾ ಸಾಮಾನ್ಯ ವ್ಯಕ್ತಿಯನ್ನೂ ದಿನ ಬೆಳಗಾಗುವಷ್ಟರಲ್ಲಿ ಸ್ಟಾರ್ ಮಾಡಿ ಬಿಡುತ್ತೆ. ಅನೇಕರು ತಮ್ಮ ಪ್ರತಿಭೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ್ದರೆ, ಕೆಲವರು ಮಾತ್ರ ತಮ್ಮ ವಿಚಿತ್ರ ನಡೆ ನುಡಿಯಿಂದ ಸೆಲೆಬ್ರಿಟಿಗಳಾಗುತ್ತಾರೆ. ಇಂತಹವರಲ್ಲಿ ದೀಪಕ್ ಕಲಾಲ್ ಕೂಡಾ ಒಬ್ಬರು. ಆದರೀಗ ಈ ಸೆಲೆಬ್ರಿಟಿ ತನ್ನ ವಿಚಿತ್ರ ನಡೆ ಹಾಗೂ ಕೆಟ್ಟ ಮಾತುಗಳಿಂದ ತನ್ನನ್ನು ಸ್ಟಾರ್ ಮಾಡಿದ್ದ ಸೋಶಿಯಲ್ ಮೀಡಿಯಾದಲ್ಲಿ ಮಾನ ಕಳೆದುಕೊಂಡಿದ್ದಾರೆ.

ರಾಖಿಗೆ ಕೂಡಿ ಬಂತು ಕಂಕಣ ಭಾಗ್ಯ! ಯಾರು ಆ ವರ ಗೊತ್ತಾ?

ಹೌದು ದೀಪಕ್ ಕಲಾಲ್ ತಮ್ಮ ಯೂಟ್ಯೂಬ್ ವಿಡಿಯೋಗಳಿಂದಲೇ ಫೇಮಸ್ ಆದವರು. ಕೆಲ ತಿಂಗಳ ಹಿಂದಷ್ಟೇ ನಟಿ ರಾಖಿ ಸಾವಂತ್ ಜೊತೆ ಇವರು ಮದುವೆಯಾಗುವ ಸುದ್ದಿ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ  ದೀಪಕ್ ಅನುಮತಿಯಿಲ್ಲದೆ ಅವರ ಸೆಲ್ಫಿ ತೆಗೆಯಲು ಯುವತಿಯೊಬ್ಬರು ಯತ್ನಿಸಿದಾಗ, ಆಕೆಯ ಮೇಲೆ ಮುಗಿಬಿದ್ದು ಗಲಾಟೆ ಮಾಡಿಕೊಂಡಿದ್ದ ಈ ಇಂಟರ್ನೆಟ್ ಸೆಲೆಬ್ರಿಟಿಯ ನಡೆಗೆ ಯುವತಿ ಸೇರಿದಂತೆ ಪ್ರಯಾಣಿಕರು ಹಿಗ್ಗಾಮುಗ್ಗಾ ಜಾಡಿಸಿದ ವಿಚಾರ ವೈರಲ್ ಆಗಿತ್ತು. ಆದರೀಗ ಸ್ಟಾರ್ ಗಿರಿ ತಲೆಗೇರಿಸಿಕೊಂಡು ಮಹಿಳೆಯರ ಬಗ್ಗೆ ಕೀಳಾಗಿ ಹಾಗೂ ಹಗುರವಾಗಿ ಮಾತನಾಡಿದ ದೀಪಕ್ ರನ್ನು ಮಹಿಳಾ ರೇಡಿಯೋ ಜಾಕಿ ಶೋನಿಂದ ಹೊರ ದಬ್ಬಿದ್ದಾರೆ. 

ಹೌದು ರೇಡಿಯೋ ಮಿರ್ಚಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರವನ್ನೇ ಮುಂದಿಟ್ಟುಕೊಂಡು ಸಂದರ್ಶನ ನಡೆಸಲು ದೀಪಕ್ ಕಲಾಲ್ ರನ್ನು ತಮ್ಮ ಸ್ಟುಡಿಯೋಗೆ ಕರೆಸಿಕೊಂಡಿತ್ತು. ಈ ಕಾರ್ಯಕ್ರಮವನ್ನು ಮಹಿಳಾ ಆರ್ ಜೆ ನಡೆಸಿಕೊಡುವವರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಆರ್ ಜೆ, ದೀಪಕ್ ಬಳಿ ಮೆಟ್ರೋದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಕೋಪದಲ್ಲೇ ಉತ್ತರಿಸಿದ ದೀಪಕ್ 'ಮಹಿಳೆ ಅಂದ್ರೆ ನಿಮಗೆ ಏನು ಗೊತ್ತಾ? ನಮ್ಮಂತ ಪುರುಷರಿಗಾಗಿ ಅಡುಗೆ ಕೋಣೆಯಲ್ಲಿ ಊಟ ತಯಾರಿಸುವುದಷ್ಟೇ ಅವರ ಯೋಗ್ಯತೆ. ಮೆಟ್ರೋದಲ್ಲಿ ನನಗೆ ಹೊಡೆದ ಹುಡುಗಿಯ ಯೋಗ್ಯತೆಯೂ ಅಷ್ಟೇ' ಎಂದಿದ್ದಾರೆ.

ಈ ವೇಳೆ ವರಿಗೆ ತಮ್ಮ ಮಾತನ್ನು ಸರಿಪಡಿಸಲು ಆರ್ ಜೆ ಅವಕಾಶ ನೀಡಿದರಾದರೂ ಮತ್ತೆ ಮಾತನಾಡಿದ ದೀಪಕ್ 'ಮಹಿಳೆಯರು ಪುರುಷರ ಅಡಿಯಾಳುಗಳು. ಅವರಿಂದ ಏನೂ ಮಾಡುಲು ಸಾಧ್ಯವಿಲ್ಲ' ಎಂದು ಉತ್ತರಿಸಿದ್ದಾರೆ.