Asianet Suvarna News Asianet Suvarna News

ಕಾವೇರಿ ಕೂಗುತ್ತಿದ್ದಾಳೆ? ಕೇಳಿಸಿಕೊಳ್ಳುವ ಹೃದಯ ನಿಮಗಿದೆಯಾ?

ಜೀವನದಿಗಳ ಉಳಿವಿಗಾಗಿ ಜನರು ‘ಕಾವೇರಿ ಕೂಗು’ ಆಂದೋಲನದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ. ಈ ಆಶಯದೊಂದಿಗೆ ಕೈಜೋಡಿಸುವ ರೈತರಿಗೆ ಮೊದಲ 3-4 ವರ್ಷ ಅರಣ್ಯ ಕೃಷಿಗೆ ಬೇಕಾಗುವ ಮೂಲ ಸೌಕರ‍್ಯಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ಮುಖಾಂತರ ಕೊಡಿಸಲಾಗುತ್ತದೆ. 

Puneeth Rajkumar sings a song for Cauvery Calling written by Jaggi Vasudev
Author
Bengaluru, First Published Sep 3, 2019, 12:28 PM IST

ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. 

ಜೀವನದಿ ಉಳಿವಿಗೆ ‘ಕಾವೇರಿ ಕೂಗು’; ನೀವೇನು ಮಾಡ್ಬಹುದು?

ಕಾವೇರಿ ಕೂಗನ್ನು ಇನ್ನಷ್ಟು ಬಲಗೊಳಿಸಲು, ಇನ್ನಷ್ಟು ಪ್ರಚೋದನೆ ಕೊಡಲು ಒಂದೊಳ್ಳೆಯ ಹಾಡನ್ನು ಕಂಪೋಸ್ ಮಾಡಲಾಗಿದೆ. ಇದಕ್ಕೆ ಜಗ್ಗಿ ವಾಸುದೇವ್ ಸಾಹಿತ್ಯ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ. 

"

 

 

ಅನುಷ್ಠಾನಗೊಳಿಸುವುದು ಹೇಗೆ?

ಜೀವನದಿಗಳ ಉಳಿವಿಗಾಗಿ ಜನರು ಈ ಆಂದೋಲನದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ. ಈ ಆಶಯದೊಂದಿಗೆ ಕೈಜೋಡಿಸುವ ರೈತರಿಗೆ ಮೊದಲ 3-4 ವರ್ಷ ಅರಣ್ಯ ಕೃಷಿಗೆ ಬೇಕಾಗುವ ಮೂಲ ಸೌಕರ‍್ಯಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ಮುಖಾಂತರ ಕೊಡಿಸಲಾಗುತ್ತದೆ. ಅಲ್ಲದೆ ಸಾಮಾನ್ಯ ಬೆಳೆ ಬೆಳೆಯುತ್ತಿರುವ ರೈತರು ಅರಣ್ಯ ಕೃಷಿಗೆ ಬದಲಾಗಲು ರೈತರನ್ನು ಮನವೊಲಿಸಲು ಆಡಳಿತ ವರ್ಗದ ಬೆಂಬಲ ಪಡೆಯಲಾಗುತ್ತದೆ.

ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

ತಮಿಳುನಾಡಿನಲ್ಲಿ ಈಶ ಫೌಂಡೇಶನ್‌ ಅಲ್ಲಿನ 6000 ಗ್ರಾಮಗಳಲ್ಲಿ ಈಗಾಗಲೇ ಅರಣ್ಯ ಕೃಷಿ ಜಾರಿಗೊಳಿಸಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲೆಂದೇ 45 ವಾಹನಗಳು ಎಲ್ಲೆಡೆ ಓಡಾಡುತ್ತಿವೆ. ಇದರ ಫಲವಾಗಿ 2.7 ಲಕ್ಷ ರೈತರು ಅರಣ್ಯ ಕೃಷಿಯಲ್ಲಿ ಪಾಲ್ಗೊಳ್ಳುವುದಾಗಿ ಬರೆದುಕೊಟ್ಟಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ಈ ಅಭಿಯಾನಕ್ಕೆ ಈಗಾಗಲೇ ಕೈಜೋಡಿಸಿವೆ.

ಈ ನಿಟ್ಟಿನಲ್ಲಿ ಈಶ ಫೌಂಡೇಷನ್‌ 33 ಕಡೆ ನರ್ಸರಿಗಳನ್ನು ನಡೆಸುತ್ತಿದೆ.ಬೃಹತ್‌ ಪ್ರಮಾಣದಲ್ಲಿ ಗಿಡಗಳು ಬೇಕಾಗುವುದರಿಂದ ಇದು ಸಾಲುವುದಿಲ್ಲ. ನರ್ಸರಿ ಆರಂಭಿಸಲು ಕೊಡಗಿನಲ್ಲಿ ಉತ್ತಮ ವಾತಾವರಣವಿರುವುದರಿಂದ 1000 ಎಕರೆ ಜಾಗವನ್ನು ನೀಡುವಂತೆ ಅಲ್ಲಿನ ಕಾಫಿ ತೋಟದ ಮಾಲೀಕರನ್ನು ಕೇಳಲಾಗಿದೆ. ಹೀಗೆ ಸರ್ಕಾರ ಮತ್ತು ದಾನಿಗಳ ನೆರವಿನಿಂದ ಈ ಅಭಿಯಾನವನ್ನು ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ.

Follow Us:
Download App:
  • android
  • ios