ಹೈದರಾಬಾದ್[ನ. 16]  ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಮೋಡಿ ಮಾಡಿರುವ ಮಿಲ್ಕಿ ಬ್ಯೂಟಿ ಕಿಸ್ಸಿಂಗ್ ಸೀನ್ ಅಂದಾಗ ದೂರ ಓಡುವುದು ಗೊತ್ತೆ ಇದೆ. ಆದರೆ ಈ ನಾಯಕನ ಜತೆ ಮಾತ್ರ ಲಿಪ್ ಲಾಕ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಪ್ರಭಾಸ್ ಜೊತೆ 'ಬಾಹುಬಲಿ' ಹಾಗೂ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ನಟನೆಗೆ ಎಲ್ಲ ಕಡೆಯಲ್ಲಿಯೂ ಫುಲ್ ಮಾರ್ಕ್ಸ್ ಪಡೆದುಕೊಂಡವರೆ.

ಸ್ವಿಮ್ ಸೂಟ್ ನಲ್ಲಿ ತಮನ್ನಾ ವಾಕ್.. ಅಬ್ಬಬ್ಬಾ..

ಹಾಟ್ ಕಾಣಿಸಿಕೊಳ್ತೀನಿ, ರೋಮ್ಯಾನ್ಸ್ ಮಾಡ್ತೀನಿ, ಗ್ಲಾಮರ್ ಗೂ ಓಕೆ. ಆದರೆ, ಲಿಪ್ ಲಾಕ್ ಆಗಲ್ಲ ಎನ್ನುತ್ತಿದ್ದ ತಮನ್ನಾ ಹೃತಿಕ್ ರೋಷನ್ ನಾಯಕನಾದರೆ ಲಿಪ್ ಲಾಕ್ ಗೆ ಸಿದ್ಧ ಎಂದಿದ್ದಾರೆ.

ಹೃತಿಕ್ ಸಿನಿಮಾದಲ್ಲಿ ನಟಿಸಲು ತಮನ್ನಾ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಒಂದು ವೇಳೆ ಅವಕಾಶ ಸಿಕ್ಕು, ಲಿಪ್ ಲಾಕ್ ಮಾಡುವ ದೃಶ್ಯವಿದ್ದರೂ ನಾನು ಮಾಡ್ತೀನಿ ಎಂದಿದ್ದಾರೆ. 

ಹಾಗಾದರೆ ಮುಂದಿನ ದಿನಗಳಲ್ಲಿ ಹೃತಿಕ್ ರೋಷನ್ ಜತೆಗೆ ತಮನ್ನಾ ಸಿನಿಮಾ ಮಾಡುತ್ತಾರಾ? ಉತ್ತರವನ್ನು ಕಾಲವೇ ಹೇಳಬೇಕು.