ಮುಂಬೈ[ಜೂ. 03]  ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಬಿಗ್ ಬಿ ಜೋಡಿ ಯಾರಿಗೂ ಗೊತ್ತಿರದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಭಾನುವಾರ ತಡರಾತ್ರಿಯೇ ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಸಂಗತಿಯೊಂದನ್ನು ಶೇರ್ ಮಾಡಿದ್ದಾರೆ. 

1973ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಮತ್ತು ಅವರ ಗಳೆಯರು ಲಂಡನ್ ನಲ್ಲಿ ರಜಾ ದಿನ ಕಳೆಯುವ ಪ್ಲ್ಯಾನ್ ಮಾಡಿದ್ದರು. ಆದರೆ ಮದುವೆಗೆ ಮುನ್ನ ಈ ರೀತಿ ತೆರಳಬೇಡಿ ಎಂದು ಅಮಿತಾಬ್ ಅಪ್ಪ ಹರಿವಂಶ್ ರೈ ಬಚ್ಚನ್ ಹೇಳಿದ್ದರು.

ಇಂಗ್ಲೆಂಡ್ ಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದಲ್ಲದೇ ಸ್ನೇಹಿತರೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತಂದೆಗೆ ಜಯಾ ಹೆಸರು ಗೊತ್ತಾದಾಗ ನಿಮಗೆ ಹೋಗಲೇ ಬೇಕು ಅಂಥ ಇದ್ದರೆ ಮದುವೆ ಮಾಡಿಕೊಂಡು ಹೋಗಿ ಅಂದರು. ಇದಾದ ಮರುದಿನವೇ ನಾವಿಬ್ಬರು ತರಾತುರಿಯಲ್ಲಿ ಮದುವೆಯಾಗಿ ಲಂಡನ್ ವಿಮಾನ ಏರಿದ್ದೇವು ಎಂದು ಬಿಗ್ ಬಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

 

 

 
 
 
 
 
 
 
 
 
 
 
 
 

Happy Anniversary to the parentals! Love you both eternally. #46andcounting

A post shared by Abhishek Bachchan (@bachchan) on Jun 2, 2019 at 7:37pm PDT