ಮೈಸೂರು: ಮಾಂಗಲ್ಯಧಾರಣೆಯ ಬಳಿಕ ನವದಂಪತಿಗಳು ಕಲ್ಯಾಣ ಮಂಟಪದಿಂದ ‘ಯುವರತ್ನ’ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ತೆರಳಿ ನಟ ಪುನೀತ್ ರಾಜಕುಮಾರ್ ಆಶೀರ್ವಾದ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 

ನಗರದ ವಿದ್ಯಾರಣ್ಯಪುರಂ ಸೊಳ್ಳೆಪುರ ನಿವಾಸಿ ಯೋಗೇಶ್ ಹಾಗೂ ಚೈತ್ರಾ ಅವರ ವಿವಾಹ ಮಹೋತ್ಸವವು ಇಲ್ಲಿನ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು. 

ಮಾಂಗಲ್ಯಧಾರಣೆಯ ಬಳಿಕ ನೇರವಾಗಿ ಯುವರತ್ನ ಸಿನಿಮಾ ಚಿತ್ರೀಕರಣ ನಡೆಯು ತ್ತಿದ್ದ ಮಹಾರಾಜ ಕಾಲೇಜಿನ ಸೆಟ್‌ಗೆ ತೆರಳಿದ ನೂತನ ದಂಪತಿ ಆಶೀರ್ವಾದ ಪಡೆದರು. ವಧು- ವರ ಇಬ್ಬರೂ ಪುನೀತ್ ರಾಜಕುಮಾರ್ ಅಭಿಮಾನಿಗಳಾಗಿದ್ದಾರೆ.