ಜಾಕಿಚಾನ್ ಅಂದ್ರೆ ಅವರು ಕುಂಗ್ ಫೂ ಪಟ್ಟುಗಳು ನೆನಪಾಗುತ್ತವೆ. ರೋಮಾಂಚನಕಾರಿ ಫೈಟಿಂಗ್‌ಗಳು ಕಣ್ಮುಂದೆ ಬರುತ್ತವೆ. ಹಾಲಿವುಡ್ ಅಂದರೆ ಬರೀ ಅಮೆರಿಕನ್ ಹಾಗೂ ವೆಸ್ಟರ್ನ್ ಸಿನಿಮಾಗಳು ಅನ್ನೋ ನಂಬಿಕೆ ಇದ್ದ ಟೈಮ್‌ನಲ್ಲೇ ಟೈಗರ್‌ನಂತೆ ಎಂಟ್ರಿಕೊಟ್ಟು ಜಗತ್ತಿನ ಕೋಟ್ಯಾಂಟರ ಜನರ ಮೈ ನವಿರೇಳುವಂತೆ ಮಾಡಿದವರು ಜಾಕಿ ಚಾನ್. ಈಗ ಅರವತ್ತೈದು ವರ್ಷ ವಯಸ್ಸು ಜಾಕಿಚಾನ್ ಗೆ. ಇವರ ಬಾಲ್ಯ ಅಂಥಾ ಸುಂದರವೇನಾಗಿರಲಿಲ್ಲ. ಅಪ್ಪ ಅಮ್ಮ ನಾಗರಿಕ ಯುದ್ಧದಲ್ಲಿ ನಿರಾಶ್ರಿತರಾಗಿದ್ದವರು. ಎಲ್ಲ ನಿರಾಶ್ರಿತರು ಅನುಭವಿಸುವಂಥಾ ಬಡತನ, ನೋವು ಬಾಲ್ಯದಲ್ಲಿ ಇವರಿಗೂ ಇತ್ತು. ಆದರೆ ಅದನ್ನೆಲ್ಲ ಮೀರಿ ಫಿರಂಗಿ ಚೆಂಡಿನಂತೆ ನೆಗೆದಾಡುತ್ತಿದ್ದ ಜಾಕಿಚಾನ್ ಗೆ ಚಿಕ್ಕ ವಯಸ್ಸಿಗೆ 'ಪಾವ್ ಪಾವ್' ಅನ್ನೋ ಅಡ್ಡನಹೆಸರಿತ್ತು. ಚೈನೀಸ್ ಭಾಷೆಯಲ್ಲಿ ಹೀಗಂದರೆ ಫಿರಂಗಿ ಚೆಂಡು ಅಂತ ಅರ್ಥ. ಸದಾ ಚಟುವಟಿಕೆಯಲ್ಲಿ ಕೂತಲ್ಲಿ ಕೂರದೇ ನಿಂತಲ್ಲಿ ನಿಲ್ಲದೇ ಇರುತ್ತಿದ್ದ ಮಗ ಮುಂದೊಂದು ದಿನ ವಿಶ್ವವೇ ಬೆರಗಾಗುವಂಥಾ ಆಕ್ಷನ್ ಕಿಂಗ್ ಆಗ್ತಾರೆ ಅಂತ ಆ ಬಡಪಾಯಿ ತಂದೆ ತಾಯಿಗಳಿಗಾದರೂ ಹೇಗೆ ಗೊತ್ತಿತ್ತು! ಕೇವಲ ಆರು ವರ್ಷ ಇರುವಾಗಲೇ ಸಿನಿಮಾ ಇಂಡಸ್ಟ್ರಿಗೆ ಬಂದ ಈ ಪೋರನದು ಆಮೇಲೆ ಜಗತ್ತೇ ತಿರುಗಿ ನೋಡುವಂಥಾ ನಿಬ್ಬೆರಗಾಗಿಸುವ ಫೈಟ್, ನಟನೆ. 'ಬಿಗ್ ಆಂಡ್ ಲಿಟಲ್ ವಾಂಗ್ ಟಿನ್ ಬಾರ್' ಸಿನಿಮಾದಲ್ಲಿ ಬಾಲನಟನಾಗಿದ್ದ ಜಾಕಿಚಾನ್ ಈವರೆಗೆ ನಟಿಸಿರುವ ಆಕ್ಷನ್ ಸಿನಿಮಾಗಳು ನೂರೈವತ್ತಕ್ಕಿಂತಲೂ ಹೆಚ್ಚು. ಆರಂಭದಲ್ಲಿ ಬಾಲನಟನಾಗಿ ಕಾಣಿಸಿಕೊಂಡವರು ಎಪ್ಪತ್ತರ ದಶಕದ ಬಳಿಕ ಆಕ್ಷನ್ ಹೀರೋ ಆಗಿ ಮಿಂಚಿದರು. ಮುಂದಿನ ವರ್ಷದವರೆಗಿನ ಸಿನಿಮಾಗಳು ಈಗಾಗಲೇ ಬುಕ್ ಆಗಿವೆ.

ಚಿತ್ರಗಳು: ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ

ತಮ್ಮ ಸಿನಿಮಾಗಳಲ್ಲಿ ಶತ್ರುಗಳನ್ನು ಕ್ಷಣಮಾತ್ರದಲ್ಲಿ ಸದೆ ಬಡಿಯುವ ಈ ಸ್ಟಾರ್‌ಗೆ ಈಗ ಕೊರೋನಾದಂಥಾ ವೈರಸ್ ಅಟ್ಯಾಕ್ ಆದರೆ ಏನಾಗಬೇಡ, ಜಗತ್ತಿನಾದ್ಯಂತದ ಅವರ ಅಭಿಮಾನಿಗಳಿಗಂತೂ ಈ ಸುದ್ದಿ ಕೇಳಿ ಶಾಕ್ ಆಯ್ತು. ನಿತ್ಯ ಬಾಗಿಲು ತೆರೆದರೆ ಸಾವಿರಾರು ಮಾಸ್ಕ್ ಗಳು ರಕ್ಷಾ ಕವಚಗಳು ಮನೆ ಮುಂದೆ ಬಿದ್ದಿರುತ್ತಿದ್ದವು. ಇಮೇಲ್, ಸೋಷಲ್ ಮೀಡಿಯಾಗಳ ತುಂಬ ಅಭಿಮಾನಿಗಳ ಕಾಳಜಿಯ ಮಾತುಗಳು ಹರಿದುಬರುತ್ತಿದ್ದವು.

ಇಂಥಾ ಆತಂಕಗಳಿಗೆಲ್ಲ ಜಾಕಿಚಾನ್ ಅವರ ಇನ್ ಸ್ಟಾಗ್ರಾಮ್ ಪೋಸ್ಟ್ ಉತ್ತರ ನೀಡಿದೆ.

'ನಿಮ್ಮೆಲ್ಲರ ಕಾಳಜಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಸೇಫ್ ಆಗಿದ್ದೇನೆ, ಚೆನ್ನಾಗಿದ್ದೇನೆ ಅಷ್ಟೇ ಅಲ್ಲ ಆರೋಗ್ಯವಂತನಾಗಿದ್ದೇನೆ. ದಯಮಾಡಿ ಚಿಂತೆ ಮಾಡಬೇಡ. ನಾನು ಕೊರೊನಾಟಿಕ್ ಅಲ್ಲ. ನನಗೆ ಕೊರೋನಾ ಅಟ್ಯಾಕ್ ಆಗಿಲ್ಲ. ಕೊರೋನಾದಿಂದ ಬಳತ್ತಿರುವ ಎಲ್ಲರೂ ಶೀಘ್ರ ಗುಣಮುಖರಾಗುತ್ತಾರೆ, ಆರೋಗ್ಯವಂತರಾಗುತ್ತಾರೆ ಎಂಬ ಭರವಸೆ ನನಗಿದೆ' ಅಂತ ಜಾಕಿಚಾನ್ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಗೆ ಲಕ್ಷಾಂತರ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ನಂಥವರೂ ಸೇರಿದ್ದಾರೆ.

ಹಾಟ್‌ ಆಗಿ ಕಾಣಿಸಿಕೊಳ್ಳೋ ಭರದಲ್ಲಿ ಮೈಮಾಟ ತೋರಿಸಿ 'ಸಿಕ್ಕಾಕ್ಕೊಂಡ’ ಮಲೈಕಾ...

ಜಗತ್ತಿನಾದ್ಯಂತದ ಮಂದಿ ತಮಗೆ ಕಳಿಸುತ್ತಿರುವ ಮಾಸ್ಕ್, ಉಡುಗೊರೆಗಳನ್ನು ಕೊರೊನಾ ಸಂತ್ರಸ್ತರಿಗೆ ಹಾಗೂ ಚಾರಿಟಿಗಳಿಗೆ ನೀಡುವಂತೆ ಜಾಕಿಚಾನ್ ತಮ್ಮ ಸಹಾಯಕರಿಗೆ ಹೇಳಿದ್ದಾರಂತೆ.

ಲಾಸ್ ಏಂಜಲೀಸ್ ನಲ್ಲಿರುವ ಎಸ್ಟೇಟ್ ಸೇರಿದಂತೆ ಜಾಕಿಚಾನ್ ಗೆ ವಿಶ್ವದ ಹಲವೆಡೆ ಆಸ್ತಿಪಾಸ್ತಿಗಳಿವೆ. ಅವರ ಹುಟ್ಟೂರು ಹಾಂಗ್ ಕಾಂಗ್ ನಲ್ಲೂ ಇವರ ಎಸ್ಟೇಟ್ ಇದೆ. ಆ ಜಾಗದಲ್ಲಿ ಸುಮಾರು ನೂರರಷ್ಟು ಜನ ಕೊರೋನಾ ದಿಂದ ಬಳಲುತ್ತರುವುದು ಸುದ್ದಿಯಾಗಿದೆ. ಹೀಗಾಗಿ ಈ ವೈರಸ್ ಸೋಂಕು ಜಾಕಿ ಚಾನ್ ಗೂ ತಗುಲಿಗೆ ಅಂತ ವಿಶ್ವಾದ್ಯಂತ ಸುದ್ದಿಯಾಗಿತ್ತು, ಇದೀಗ ಸ್ವತಃ ಜಾಕಿ ಚಾನ್ ಈ ಸ್ಪಷ್ಟನೆ ನೀಡುವ ಮೂಲಕ ಸುದ್ದಿಗೆ ತೆರೆ ಎಳೆದಿದ್ದಾರೆ.