ಮುಂಬೈ[ಜೂ. 27]  ಯಶಸ್ವಿಯಾಗಿ ಪ್ರದರ್ಶನ  ಕಾಣುತ್ತಿರುವ ಕಬೀರ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.  ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ನಿರ್ಮಾಪಕರ ವಿರುದ್ಧ ಮುಂಬೈ ಮೂಲದ ವೈದ್ಯರೊಬ್ಬರು ದೂರು ನೀಡಿದ್ದಾರೆ.

ಕಬೀರ್ ಸಿಂಗ್ ಚಿತ್ರದಲ್ಲಿ ವೈದ್ಯ ವೃತ್ತಿಯನ್ನು ಅವಮಾನಿಸುವ ರೀತಿಯ ದೃಶ್ಯಗಳಿವೆ. ನಾಯಕ ಸರ್ಜನ್ ಪಾತ್ರ ನಿಭಾಯಿಸುತ್ತಿದ್ದು ಯಾವಾಗಲೂ ಕುಡಿದ ಮತ್ತಿನಲ್ಲೇ ಇರುತ್ತಾರೆ. ನಂತರ ಡ್ರಗ್ಸ್ ಚಟಕ್ಕೂ ಬಲಿಯಾಗಿರುವ ದೃಶ್ಯಗಳಿವೆ. ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ನೀಡಿರುವ ಪ್ರಮಾಣ ಪತ್ರ ಹಿಂಪಡೆಯಬೇಕು ಎಂದು ವೈದ್ಯರು ಒತ್ತಾಯ ಮಾಡಿದ್ದಾರೆ.

ಮೊಮ್ಮಗಳು ಕಿಯಾರಾ ಜತೆ ಕುಳಿತು ಅಜ್ಜಿ ನೋಡಿದ್ರು ಆ ಸೀನ್!

ಕೇಂದ್ರ ಆರೋಗ್ಯ ಸಚಿವರಿಗೆ, ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ಮಹಾರಾಷ್ಟ್ರ ಆರೋಗ್ಯ ಇಲಾಖೆಗೂ ಪತ್ರ ಬರೆದಿದ್ದಾರೆ. ವೈದ್ಯರನ್ನು ಕೆಟ್ಟದಾಗಿ ತೋರಿಸಿದ್ದು ಅವರ ಮೇಲೆ ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಈ ಸಿನಿಮಾದಿಂದ ಮೂಡಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.