ಎಂದೋ ಶೇರ್ ಮಾಡಿದ್ದ ನಗ್ನ ಪೋಟೋಕ್ಕೆ ಬಗೆಬಗೆಯ ಕಮೆಂಟ್!
ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿಕೆ ನೀಡಿ ಹಾಗೆ ಮಾಡಿದ್ದ, ಬಿಗ್ ಬಾಸ್ ಸೀಸನ್ 7ರ ನಂತರ ಮರೆಯಾಗಿದ್ದ ನಟಿ, ರೂಪದರ್ಶಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿರುವ ಪೋಟೋ ಸದ್ದು ಮಾಡುತ್ತಿದೆ.
ತನ್ನ ಗಂಡನೇ ತನ್ನನ್ನು ಕೊಲ್ಲಲು ಹಲವಾರು ಸಾರಿ ಪ್ರಯತ್ನ ಪಟ್ಟಿದ್ದ ಎಂದು ಹೇಳಿದ್ದ ಸೋಫಿಯಾ ಹಯಾತ್ ತಮ್ಮ ಇಸ್ಟಾಗ್ರ್ಯಾಮ್ ಪೇಜ್ ನಲ್ಲಿ ನಗ್ನ ಪೋಟೋ ಹರಿಬಿಟ್ಟಿದ್ದಾರೆ.
ಈ ಪೋಟೋ ನೋಡಿದ ನೆಟ್ಟಿಗರು ಸಹಜವಾಗಿಯೇ ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸೋಫಿಯಾ ಚಿತ್ರ ಹರಿಯಬಿಟ್ಟ ಕಾರಣವನ್ನು ಸಮರ್ಥಿಸಿಕೊಂಡಿದ್ದಾರೆ. 15 ದಿನದ ಹಿಂದೆಯೇ ಚಿತ್ರ ಶೇರ್ ಮಾಡಿದ್ದರೂ ಈಗ ಕಮೆಂಟ್ ಗಳು ಸೋಫಿಯಾ ಅವರನ್ನು ಕಾಡಹತ್ತಿವೆ.
ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು
ಸೌಂದರ್ಯ ಎನ್ನುವುದು ನಮ್ಮ ಆಂತರ್ಯದಲ್ಲಿ ಹುದುಗಿರುತ್ತದೆ. ಅದನ್ನು ದೇಹದ ಪ್ರದರ್ಶನದಿಂದ ತೋರಿಸಲು ಅಸಾಧ್ಯ. ನಗುವಿನ ಮೂಲಕ ಜನರನ್ನು ನಿಮ್ಮತ್ತ ಸೆಳೆಯುವ ಕೆಲಸ ಮಾಡಿ ಎಂದು ಮುಂತಾಗಿ ಅನೇಕ ಸಲಹೆಗಳು ಸೋಫಿಯಾ ಅವರಿಗೆ ಹರಿದು ಬರುತ್ತಿವೆ.