ಈ ವರ್ಷದ ಮಿಸ್‌ ವಲ್ಡ್ ಸ್ಪರ್ಧೆ ಭಾರತದಲ್ಲಿ ಆಯೋಜನೆ. ಡಿ.8ರಂದು  ಕಾಶ್ಮೀರದಲ್ಲಿ ಆಯೋಜನೆ ಕುರಿತು ಮಿಸ್‌ ವಲ್ಡ್ ಸಿಇಒ ಘೋಷಣೆ. ಕನ್ನಡತಿ ಸಿನಿ ಶೆಟ್ಟಿ ಭಾರತದಿಂದ ಸ್ಪರ್ಧೆ.

ಶ್ರೀನಗರ (ಆ.30): 2023ನೇ ಸಾಲಿನ 71ನೇ ಮಿಸ್‌ ವಲ್ಡ್ ಸ್ಪರ್ಧೆಯನ್ನು ಕಾಶ್ಮೀರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಡಿ.8ರಂದು ಕಾಶ್ಮೀರದಲ್ಲಿರುವ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಭಾರತವು ಎರಡನೇ ಬಾರಿಗೆ ಸ್ಪರ್ಧೆಯನ್ನು ಆಯೋಜಿಸಿದೆ. 27 ವರ್ಷಗಳ ಬಳಿಕ ಭಾರತದಲ್ಲಿ ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದು, 130 ದೇಶಗಳ ರೂಪದರ್ಶಿಯರು ಇದರಲ್ಲಿ ಭಾಗಿಯಾಗಲಿದ್ದಾರೆ.

ಪ್ರಸ್ತುತ ಕಾಶ್ಮೀರ ಪ್ರವಾಸದಲ್ಲಿರುವ ‘ವಿಶ್ವ ಸುಂದರಿ’ ಸಂಸ್ಥೆಯ ಸಿಇಒ ಜೂಲಿಯಾ ಎರಿಕ್‌ ಮೊರೇಲಿ ಈ ಬಾರಿಯ ಮಿಸ್‌ ವಲ್ಡ್ ಸ್ಪರ್ಧೆಯನ್ನು ಕಾಶ್ಮೀರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಜವಾಗಿಯೂ ನನಗೆ ತುಂಬಾ ಖುಷಿಯಾಗುತ್ತಿದೆ. ಇಲ್ಲಿನ ಸೌಂದರ್ಯ ನಮ್ಮನ್ನು ಭಾವುಕರನ್ನಾಗಿಸುತ್ತಿದೆ. 130 ದೇಶಗಳನ್ನು ಇಲ್ಲಿಗೆ ಕರೆತರಲು ಕಾತುರಳಾಗಿದ್ದೇನೆ. ಇಲ್ಲಿನ ಪ್ರತಿಯೊಬ್ಬರು ಸೌಮ್ಯ ಮತ್ತು ಸಹಾಯಗುಣವುಳ್ಳವರಾಗಿದ್ದಾರೆ. ವಿಶ್ವ ಸುಂದರಿಯ ಹೊಸ ತಂಡ ನವೆಂಬರ್‌ಗೆ ಇಲ್ಲಿಗೆ ಆಗಮಿಸಲಿದೆ. ಡಿ.8ಕ್ಕೆ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ಮತ್ತೆ ಕಾಶ್ಮೀರಕ್ಕೆ ಬರುವ ಗಳಿಗೆಗಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರವಾಸಿಗರ ಸ್ವರ್ಗ ಕಾಶ್ಮೀರಕ್ಕೆ ಮನಸೋತ ಪೋಲೆಂಡ್‌ ವಿಶ್ವಸುಂದರಿ: Bengaluru ಬಗ್ಗೆ ಕರೋಲಿನಾ ಹೇಳಿದ್ದೀಗೆ..

1951ರಲ್ಲಿ ಆರಂಭವಾದ ಮಿಸ್‌ ವಲ್ಡ್ ಸ್ಪರ್ಧೆ ಜಗತ್ತಿನ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಎನಿಸಿಕೊಂಡಿದೆ. ರೂಪದರ್ಶಿಯರ ಪ್ರತಿಭೆ, ಜ್ಞಾನ ಮತ್ತು ಸೌಂದರ್ಯವನ್ನು ಮಾನದಂಡವಾಗಿಟ್ಟುಕೊಂಡು ವಿಜೇತರನ್ನು ಘೋಷಿಸಲಾಗುತ್ತದೆ. ಇದರಲ್ಲಿ ಜಯಗಳಿಸಿದವರನ್ನು 1 ವರ್ಷದ ಅವಧಿಗೆ ಸಂಸ್ಥೆಯ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನೇಮಕ ಮಾಡಲಾಗುತ್ತದೆ. 1966ರಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳೆ ರಿಟಾ ಫರೀಯಾ ಮಿಸ್‌ ವಲ್ಡ್ ಕಿರೀಟ ಧರಿಸಿದರು. ಇದಾದ ಬಳಿಕ 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡೆನ್‌, 1999ರಲ್ಲಿ ಯುಕ್ತಾ ಂಊಖಿ, 2000ದಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಚಿಲ್ಲರ್‌ ಈ ಪಟ್ಟವನ್ನು ಗೆದ್ದುಕೊಂಡಿದ್ದರು.

ಚೊಚ್ಚಲ ಹಿಟ್ ಚಿತ್ರದಲ್ಲಿ ಭರವಸೆಯ ನಟ, 34ನೇ ವಯಸ್ಸಿಗೆ ರೇಪ್‌ ಅರೋಪಕ್ಕೆ ಬದುಕು ಕೊನೆ

ಭಾರತದಿಂದ ಸಿನಿ ಶೆಟ್ಟಿ ಸ್ಪರ್ಧೆ: 2023ನೇ ಸೌಂದರ್ಯ ಸ್ಪರ್ಧೆಗೆ ಭಾರತದಿಂದ ಉಡುಪಿ ಮೂಲದ ಸಿನಿ ಸದಾನಂದ ಶೆಟ್ಟಿ ಭಾಗವಹಿಸುತ್ತಿದ್ದಾರೆ. ಇವರು 2022ರಲ್ಲಿ ಮಿಸ್ ಇಂಡಿಯಾ ಪಟ್ಟ ಮತ್ತು ಅದೇ ವರ್ಷ ಮಿಸ್‌ ಕರ್ನಾಟಕ ಪಟ್ಟವನ್ನು ಮುಡುಗೇರಿಸಿಕೊಂಡಿದ್ದಾರೆ. ಸಿನಿಗೆ ನೃತ್ಯ ಅಚ್ಚುಮೆಚ್ಚು, ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಮತ್ತು ಹದಿನಾಲ್ಕನೆಯ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ತಮ್ಮ ಅರಂಗಾಟಮ್ ಕಲಿತಿದ್ದಾರೆ. ನೃತ್ಯದ ಜೊತೆಗೆ ಸಿನಿ ಶೆಟ್ಟಿ ನಟಿ, ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಕೂಡ ಹೌದು.