ಕಾರವಾರ (ಫೆ.24): ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವ ಅಂಶವನ್ನು ತೆಗೆದುಹಾಕಿ ಚಿತ್ರವನ್ನು ಮರುಬಿಡುಗಡೆಗೊಳಿಸಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಆಗ್ರಹಿಸಿದ್ದಾರೆ. 

ಈ ಬಗ್ಗೆ ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು ಪೊಗರು ತನ್ನ ಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ. ಅದು ಬಿಟ್ಟು ಬೇರೆ ಸಮುದಾಯದ ಮೇಲೆ ಬ್ರಾಹ್ಮಣರ ಮೇಲೆ ಅವಹೇಳನ ಮಾಡಿರುವುದು ನಿಜಕ್ಕೂ ಅತ್ಯಂತ ಖಂಡನೀಯ ಎಂದಿದ್ದಾರೆ. 

‘ಪೊಗರು’ ಚಿತ್ರದ 14 ದೃಶ್ಯಗಳಿಗೆ ಕತ್ತರಿ ..

ಚಿತ್ರತಂಡವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಲ್ಲದೆ ಅರ್ಚಕರ ಸಂಪ್ರದಾಯವನ್ನು ಅವಮಾನಿಸಿದೆ. ಹಾಗಾಗಿ ತಕ್ಷಣವೇ ಬ್ರಾಹ್ಮಣ ಸಮುದಾಯದ ಅವಹೇಳನವಿರುವ ಅಂಶವನ್ನು ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದಾರೆ.