ರೆಹಮಾನ್ ಸಂಗೀತ ಸಭೆಯಲ್ಲಿ ಭಾರೀ ಅವ್ಯವಸ್ಥೆ: 10 ಸಾವಿರ ಜನ ಸೇರುವ ಮೈದಾನಕ್ಕೆ 1 ಲಕ್ಷ ಟಿಕೆಟ್ ಸೇಲ್ ಮಾಡಿದ್ದೇ ಕಾರಣ
ಭಾನುವಾರದಂದು ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರೀ ಅವ್ಯವಸ್ಥೆ ಕಂಡು ಬಂದಿದ್ದು ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ.

ಚೆನ್ನೈ: ಭಾನುವಾರದಂದು ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರೀ ಅವ್ಯವಸ್ಥೆ ಕಂಡು ಬಂದಿದ್ದು ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಿಸದ ‘ಎಟಿಸಿಟಿ ಇವೆಂಟ್ಸ್’ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಟಿಕೆಟ್ ಪಡೆದೂ ಕೂಡ ಕಾರ್ಯಕ್ರಮ ನೋಡಲು ಸಾಧ್ಯವಾಗದವರಿಗೆ ಟಿಕೆಟ್ ಹಣ ಮರುಪಾವತಿ ಮಾಡುವುದಾಗಿ ರೆಹಮಾನ್ ಹೇಳಿದ್ದಾರೆ. ಎಟಿಟಿಸಿ ಕೂಡ ಟ್ವೀಟ್ ಮಾಡಿ ತಾನು ಹಣ ಮರಳಿಸುವುದಾಗಿ ಹೇಳಿದೆ.
ಆಗಿದ್ದೇನು?:
ನಗರದ ಆದಿತ್ಯರಾಮ್ ಪ್ಯಾಲೆಸ್‌ನಲ್ಲಿ (Adityaram Palace) ಆಯೋಜಿಸಲಾಗಿದ್ದ ‘ಮರಕ್ಕುಮಾ ನೆಂಜಂ’ ಎಂಬ ಕಾರ್ಯಕ್ರಮದಲ್ಲಿ ರೆಹಮಾನ್ (A.R Rahaman) ಭಾನುವಾರ ಸಂಜೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಇದಕ್ಕಾಗಿ ಆಯೋಜಕರು (Organizer) ಭಾರೀ ಪ್ರಮಾಣದ ದರ ಇರಿಸಿದ್ದು, 5 ಸಾವಿರ ರು.ನಿಂದ 50,000 ರು.ಗಳಿಗೆ ಒಂದು ಟಿಕೆಟ್ ವಿತರಿಸಿದ್ದಾರೆ. ಸುಮಾರು 10 ಸಾವಿರ ಜನರು ಹಿಡಿಯಬಹುದಾದ ಮೈದಾನದಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ವಿತರಿಸಲಾಗಿತ್ತು ಎನ್ನಲಾಗಿದೆ. ಇದಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಅಲ್ಲದೇ ಪಾರ್ಕಿಂಗ್ ಸೌಲಭ್ಯವೂ ಇರಲಿಲ್ಲ.
ಬಾಲಿವುಡ್‌ನಲ್ಲಿ ಹಣ, ಪ್ರಖ್ಯಾತಿ ಸಿಕ್ಕರೂ ಮುಂಬೈಗೆ ಯಾಕೆ ಶಿಫ್ಟ್ ಆಗಲಿಲ್ಲ? ಎಆರ್ ರೆಹಮಾನ್ ಹೇಳಿದ್ದಿಷ್ಟು..
ಟಿಕೆಟ್ ಪಡೆಯದವರೂ ಕೂಡಾ ಏಕಾಏಕಿ ಕಾರ್ಯಕ್ರಮಕ್ಕೆ ಬಂದಿದ್ದರಿಂದ ತೀರಾ ಜನಸಂದಣಿ ಉಂಟಾಗಿತ್ತು. ಈ ವೇಳೆ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಜನರು ಜನಸಂದಣಿಯಲ್ಲಿ ಸಿಲುಕಿ ಅಳುವ ವಿಡಿಯೋಗಳೂ ವೈರಲ್ ಆಗಿವೆ. ಟ್ರಾಫಿಕ್ ಜಾಂನಿಂದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K. Stalin) ಅವರ ಬೆಂಗಾವಲು ವಾಹನಗಳೂ ಪರದಾಡಿವೆ. ಈ ನಡುವೆ ‘ಇನ್ನು ನಾವು ರೆಹಮಾನ್ ಅಭಿಮಾನಿಯೇ ಅಲ್ಲ’ ಎಂದೆಲ್ಲ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
ಹೊಸ ಸಾಹಸಕ್ಕೆ ಕೈ ಹಾಕಿದ ಆಸ್ಕರ್ ವಿಜೇತ ಎಆರ್ ರೆಹಮಾನ್ ಪುತ್ರಿ ಖತಿಜಾ; ಏನದು?