ಈಕೆ ಮಲೆಯಾಳಂ ಚಿತ್ರರಂಗದ ಮುಗ್ಧ ಚೆಲುವೆ. ನಟಿ ಮಣಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಸರ್ವೇ ಸಾಮಾನ್ಯ. ಆದರೆ ಹಲವರು ತಮಗೆ ಎದುರಾಗುವ ಕೆಟ್ಟ ಕಮೆಂಟ್ ಗಳಿಗೆ ಉತ್ತರ ಕೊಡುವುದಿಲ್ಲ. ಆದರೆ ಈ ನಟಿ ಸರಿಯಾಗಿ ಜಾಡಿಸಿದ್ದಾರೆ.
ಮಲೆಯಾಳಂ ಚಿತ್ರರಂಗದ ಚೆಲುವೆ ದೃಶ್ಯ ರಘುನಾಥ್ ಕೆಟ್ಟ ಕಮೆಂಟ್ ಮಾಡಿದವನಿಗೆ ಸರಿಯಾಗಿ ಜಾಡಿಸಿದ್ದಾರೆ. ಇಸ್ಟಾಗ್ರ್ಯಾಮ್ ನಲ್ಲಿ ಹಂಚಿಕೊಂಡಿದ್ದ ಪೋಟೋಕ್ಕೆ ವ್ಯಕ್ತಿಯೊಬ್ಬ ಕಮೆಂಟಿಸಿದ್ದ.
ಇದಕ್ಕೆ ತಕ್ಕ ಉತ್ತರ ನೀಡಿದ ನಟಿ, ಹೌದು ನಾನು ಬಿಕಿನಿ ಧರಿಸಿದ್ದೇನೆ, ಧರಿಸುವ ಸ್ವಾತಂತ್ರ್ಯ ನನಗೆ ಇದೆ ತಾನೆ.. ಮುಕ್ತವಾಗಿ ನಿನಗೆ ಹೇಳುತ್ತಿದ್ದೇನೆ.. ನೀನು ಕಮೆಂಟ್ ಮಾಡಿದ್ದೆಯಲ್ಲ ಹೌದು ಅದು ನನ್ನ ಸ್ತನಗಳು.. ಅವು ನಿಸರ್ಗದತ್ತವಾದ ಪ್ರತಿ ಮನುಷ್ಯನ ದೇಹದಲ್ಲಿಯೂ ಇರುತ್ತವೆ.. ಅದನ್ನು ಕತ್ತರಿಸಲು ಸಾಧ್ಯವೇ ಇಲ್ಲ. ನಾನು ಅವುಗಳನ್ನು ಪ್ರದರ್ಶನ ಮಾಡಿಕೊಂಡು ಓಡಾಡಿಲ್ಲ ಎಂದು ಚಾಟಿ ಬೀಸಿದ್ದಾರೆ.

