Asianet Suvarna News Asianet Suvarna News

Gufi Paintal and Sulochana Death News: ಒಂದೇ ದಿನ ಇಬ್ಬರು ಮಹಾನ್​ ತಾರೆಯರನ್ನು ಕಳೆದುಕೊಂಡ ಬಾಲಿವುಡ್​

ಒಂದು ಕಾಲದಲ್ಲಿ ಮಹಾಭಾರತದ ಮೂಲಕ ಜನರನ್ನು ಮೋಡಿ ಮಾಡಿದ್ದ ಶಕುನಿ ಮಾಮಾ ಗುಫಿ ಪೈಂಟಲ್​ ಮತ್ತು ಬಾಲಿವುಡ್​ ಫ್ಯಾನ್​ಗಳನ್ನು ಮೋಡಿ ಮಾಡಿದ್ದ ನಟಿ ಸಲೋಚನಾ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ. 
 

Mahabarath Shakuni Mama Gufi Paintal and Senior Bollywood Actress Sulochana Latkar is no more
Author
First Published Jun 5, 2023, 1:10 PM IST

ನವದೆಹಲಿ: 1988ರಿಂದ 1990ರ ವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ   ಧಾರಾವಾಹಿಯಲ್ಲಿ ಸದಾ ನೆನಪಿನಲ್ಲಿ ಉಳಿಯುವ ಪಾತ್ರಗಳಲ್ಲಿ ಒಂದು ಶಕುನಿ ಮಾಮಾ (Shakuni Mama). ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೇ ಸರಿ. ಈ ಪಾತ್ರಧಾರಿ, ಹಿರಿಯ ನಟ ಗುಫಿ ಪೈಂಟಲ್​ ಇಂದು ವಿಧಿವಶರಾಗಿದ್ದಾರೆ.  ಅವರಿಗೆ  78 ವರ್ಷ ವಯಸ್ಸಾಗಿತ್ತು.  ಅವರ ಸೋದರಳಿಯ ಹಿಟೆನ್ ಪೈಂಟಲ್ ಅವರು ತಮ್ಮ ಇನ್​ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಇವರು ಬಳಲುತ್ತಿದ್ದರು. ಗುಫಿ ಪೈಂಟಲ್ ಅವರ ಮೂಲ ಸರಬ್ಜಿತ್ ಸಿಂಗ್ ಪೈಂಟಲ್. ಅವರು ಅಕ್ಟೋಬರ್ 4, 1944 ರಂದು ಪಂಜಾಬ್‌ನ ತರ್ನ್ ತರನ್‌ನಲ್ಲಿ ಜನಿಸಿದರು. ಇವರು ಬಾಲಿವುಡ್ ನ ಖ್ಯಾತ ನಟ ಪೆಂಟಲ್ ಅವರ ಅಣ್ಣ. ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಅವರು 1969 ರಲ್ಲಿ ಮುಂಬೈಗೆ ಬಂದು  ಆರಂಭಿಕ ದಿನಗಳಲ್ಲಿ ಮಾಡೆಲಿಂಗ್​ ಮಾಡಿದವರು.  

ಅಷ್ಟೇ ಅಲ್ಲ ಗುಫಿ ಪೈಂಟಲ್​ (Gufi Paintal) ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಬಿ.ಆರ್ ಚೋಪ್ರಾ (B.R. Bhopra) ಅವರ ಮಹಾಭಾರತ (Mahabharath) ಧಾರಾವಾಹಿ ಅವರನ್ನು ಪ್ರತಿ ಮನೆಯಲ್ಲೂ ಜನಪ್ರಿಯಗೊಳಿಸಿತು. ಮಹಾಭಾರತದಲ್ಲಿ, ಅವರು ದುರ್ಯೋಧನನ ತಾಯಿಯ ಮಾವ ಶಕುನಿಯ ಪಾತ್ರವನ್ನು ನಿರ್ವಹಿಸಿದರು. ಚಲನಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ಟಿ.ವಿ.ಧಾರಾವಾಹಿಗಳು.  ಮಹಾಭಾರತದ ಹೊರತಾಗಿ, ಗುಫಿ ಪೈಂಟಲ್​ ಕಾನೂನ್, ಓಂ ನಮಃ ಶಿವಾಯ, ಸಿಐಡಿ, ಶ್ರೀಮತಿ ಕೌಶಿಕ್ ಔರ್​ ಪಾಂಚ್​ ಬಹುಯೇ, ಕರ್ಮ್ಫಲ್ ಡಾಟಾ ಶನಿ, ರಾಧಾಕೃಷ್ಣ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಾಭಾರತದ 'ಶಕುನಿ ಮಾಮಾ' ಸ್ಥಿತಿ ಗಂಭೀರ! ಎಂಜಿನಿಯರ್​ ಆಗಿದ್ದವರು 'ಶಕುನಿ'ಯಾದದ್ದು ಹೇಗೆ?

ಅದೇ ರೀತಿ ಇನ್ನೋರ್ವ ಮಹಾನ್​ ಬಾಲಿವುಡ್​ ನಟಿ, ಹಿರಿಯ ತಾರೆ  ಸುಲೋಚನಾ ಲಾಟ್ಕರ್ (Sulochana Latkar) ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.  ಕೆಲವು ಸಮಯದಿಂದ ಇವರು  ಮುಂಬೈನ ಸುಶ್ರುಷಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು.   ಅವರ ಪುತ್ರಿ ಕಾಂಚನ್ ಘಾನೇಕರ್ ನಿಧನದ ಕುರಿತು ಮಾಹಿತಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು  ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರಿಗೆ ನಿರಂತರವಾಗಿ ಆಮ್ಲಜನಕ ನೀಡಲಾಗಿತ್ತು.  ಆದರೂ ಅವರು ಬದುಕಲಿಲ್ಲ.
   
ಸುಲೋಚನಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅತ್ಯಂತ ಸುಂದರ ತಾರೆ ಎಂದೇ ಇವರನ್ನು ಪರಿಗಣಿಸಲಾಗಿತ್ತು. 40 ರಿಂದ 60ರ ದಶಕದವರೆಗೆ ಇವರು ಮರಾಠಿ ಚಿತ್ರರಂಗ ಮತ್ತು ಬಾಲಿವುಡ್​ನಲ್ಲಿ  ಮೋಡಿ ಮಾಡಿದ್ದರು. ಇವರ ಹಲವಾರು ಪಾತ್ರಗಳನ್ನು ಅವರ ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಮುದ್ದು ಮೊಗದ ಸಲೋಚನಾ ಅವರನ್ನು ನೋಡುವುದಕ್ಕಾಗಿ ಚಿತ್ರರಂಗಕ್ಕೆ ಅಂದಿನ ಕಾಲದಲ್ಲಿ ದೌಡಾಯಿಸುತ್ತಿದ್ದುದು ಉಂಟು. ದೇಹ ಸೌಂದರ್ಯ ಮಾತ್ರವಲ್ಲದೇ ತಮ್ಮ ಪಾತ್ರಗಳಿಗೂ ಜೀವ ತುಂಬುತ್ತಿದ್ದವರು ಸುಲೋಚನಾ. ಅವರು ಮರಾಠಿಯಲ್ಲಿ 50 ಮತ್ತು ಹಿಂದಿಯಲ್ಲಿ 250 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.  ಅವರು 1946 ರಲ್ಲಿ ಚಲನಚಿತ್ರಕ್ಕೆ  ಪದಾರ್ಪಣೆ ಮಾಡಿದರು.  1946 ರಿಂದ 1961 ರವರೆಗೆ ಮರಾಠಿ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಕೆಲಸ ಮಾಡಿದರು. ಅವರ ಜನಪ್ರಿಯ ಮರಾಠಿ ಚಲನಚಿತ್ರಗಳು 'ಸಸುರ್ವಾಸ್', 'ಮೀತ್ ಭಾಕರ್' ಮತ್ತು 'ಸಂಗ್ತಿ ಏಕಾ' ಸೇರಿವೆ. ಅವರು ಬಾಲಿವುಡ್‌ನಲ್ಲಿ 'ಹೀರಾ', 'ಜೂಥಾ', 'ಏಕ್ ಫೂಲ್ ಚಾರ್ ಕಾಂಟೆ', 'ಸುಜಾತಾ', 'ಮೆಹರ್ಬಾನ್', 'ಚಿರಾಗ್' ಮತ್ತು 'ಭಾಯ್ ಬೆಹೆನ್' ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು ಸುನೀಲ್ ದತ್, ದೇವ್ ಆನಂದ್ ಮತ್ತು ರಾಜೇಶ್ ಖನ್ನಾ ಅವರ ತಾಯಿಯ ಪಾತ್ರಗಳೊಂದಿಗೆ ಹಿಂದಿ ಚಲನಚಿತ್ರಗಳಲ್ಲಿ ಛಾಪು ಮೂಡಿಸಿದರು. 

ರಸ್ತೆ ಅಪಘಾತ: ಖ್ಯಾತ ಕಿರುತೆರೆ ನಟ ಕೊಲ್ಲಂ ಸುಧಿ ನಿಧನ

Follow Us:
Download App:
  • android
  • ios