ಬೆಂಗಳೂರು (ಫೆ. 27): ಲಹರಿ ಆಡಿಯೋ ಸಂಸ್ಥೆ ಸಾಮಾಜಿಕ ಜಾಲ ತಾಣದಲ್ಲಿ ಹೊಸ ದಾಖಲೆ ಬರೆದಿದೆ. ಹಾಡುಗಳ ಪ್ರಸಾರಕ್ಕೆ ಲಹರಿ ಸಂಸ್ಥೆ ಶುರು ಮಾಡಿರುವ ಲಹರಿ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ ಮಂಗಳವಾರಕ್ಕೆ 50 ಲಕ್ಷ ತಲುಪಿದೆ. ಕನ್ನಡದ ಮಟ್ಟಿಗೆ ಸಂಗೀತ ಸಂಸ್ಥೆಯೊಂದು ಸೋಷಲ್‌ ಮೀಡಿಯಾದಲ್ಲಿ ಇಷ್ಟುಪ್ರಮಾಣದ ಚಂದಾದಾರರನ್ನು ಹೊಂದಿರುವುದು ಇದೇ ಮೊದಲು.

ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್

ಈಗಾಗಲೇ ಲಹರಿ ಸಂಸ್ಥೆಯು ತನ್ನ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ 10 ಲಕ್ಷ ತಲುಪಿದ ಸಂದರ್ಭದಲ್ಲಿ ಯುಟ್ಯೂಬ್‌ ಸಂಸ್ಥೆ ಕಡೆಯಿಂದ ಯುಟ್ಯೂಬ್‌ ಗೋಲ್ಡ್‌ ಪ್ರಶಸ್ತಿಗೆ ಪಾತ್ರವಾಗಿದೆ. ಯಾವುದೇ ಸಂಸ್ಥೆಯ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ ಬರೋಬ್ಬರಿ 1 ಕೋಟಿಗೆ ತಲುಪಿದಾಗ ಯುಟ್ಯೂಬ್‌ ಸಂಸ್ಥೆ ಪ್ರತಿಷ್ಟಿತ ಯುಟ್ಯೂಬ್‌ ರೂಬಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅದನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದೆ ಲಹರಿ ಸಂಸ್ಥೆ.

‘ನಾವು ಏನೇ ಮಾಡಿದ್ದರೂ ಅದು ಕನ್ನಡಿಗರು ನೀಡಿದ ಶಕ್ತಿ. ಅವರ ಸಹಕಾರದಿಂದಲೇ ಲಹರಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಚಂದಾದಾರರ ಸಂಖ್ಯೆ ಈ ಮಟ್ಟಕ್ಕೆ ಹೆಚ್ಚಾಗುತ್ತಿದೆಯೆಂದರೆ, ಜಗತ್ತಿನಾದ್ಯಂತ ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆ ಹೆಚ್ಚುತ್ತಿದೆ ಅಂತಲೇ ಅರ್ಥ. ಅದಕ್ಕಾಗಿ ಖುಷಿ ಆಗುತ್ತಿದೆ.-ಲಹರಿ ವೇಲು.