ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಗಳ ಹುಟ್ಟುಹಬ್ಬದ ದಿನ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಲಾಕ್‌ಡೌನ್ ದಿನಗಳಲ್ಲಿ ಮನೆಯಲ್ಲೇ ಇರುವ ಸುದೀಪ್ ತಮ್ಮ ಮುದ್ದಿನ ಮಗಳ ಬರ್ತ್‌ಡೇಗೆ ಸ್ಪೆಷಲ್ ವಿಶ್ ಮಾಡಿದ್ದಾರೆ. 16ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ತಿರೋ ಮಗಳಿಗೆ ಹ್ಯಾಪಿ ಬರ್ತ್‌ಡೇ ಹೇಳಿದ್ದಾರೆ.

"

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರೋ ಸುದೀಪ್ ಮಗಳ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಭಾವುಕ ಕವನವೊಂದನ್ನು ಹಂಚಿಕೊಂಡಿದ್ದಾರೆ.

ಮಗಳ ಬಾಲ್ಯ, ಮಗಳೊಂದಿಗೆ ಕಳೆದ ಕ್ಷಣ, ಅದೆಯೆತ್ತರ ಬೆಳೆದ ಮಗಳ ಕುರಿತ ಪ್ರೀತಿಯನ್ನು ಕೆಲವೇ ಕೆಲವು ಸಾಲುಗಳಲ್ಲಿ ಭಾವುಕವಾಗಿ ವ್ಯಕ್ತಪಡಿಸಿದ್ದಾರೆ. ಎದೆಯೆತ್ತರ ಬೆಳೆದ ಮಗಳ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ. ನಮ್ಮ ಕಡೆಯಿಂದಲೂ ಕಿಚ್ಚ ಸುದೀಪ್ ಮಗಳಿಗೆ ಹ್ಯಾಪಿ ಬರ್ತ್‌ಡೇ..