ಬೆಂಗಳೂರು (ಡಿ. 19): ಸಾಕಷ್ಟು ವರ್ಷಗಳಿಂದ ಸುದೀಪ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದ ನಂದೀಶ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಅಭಿಮಾನಿಯ ಸಾವಿಗೆ ಮರುಗಿದ ಅಭಿನಯ ಚಕ್ರವರ್ತಿ ಅಭಿಮಾನಿಯ ಫೋಟೋವನ್ನ ಟ್ವಿಟರ್ ಡಿಪಿ ಆಗಿ ಬದಲಾಯಿಸಿಕೊಂಡಿದ್ದಾರೆ. 

 

ನನ್ನ ಸಹೋದರ ನಂದೀಶ್ ಇನ್ನಿಲ್ಲ ಎಂಬುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖಂಡಿತವಾಗಿಯೂ ಇದು ತುಂಬಲಾರದ ನಷ್ಟ. ಅವರ ಕುಟುಂಬ ಹಾಗೂ ಸ್ನೇಹಿತರ ವರ್ಗಕ್ಕೆ ನನ್ನ ಸಂತಾಪಗಳು' ಎಂದಿದ್ದಾರೆ