ನಟಿಗೆ ಲೈಂಗಿಕ ಕಿರುಕುಳ: ನಟ ದಿಲೀಪ್‌ ವಿರುದ್ಧ ಆರೋಪ ಪಟ್ಟಿ

ಬಹು ಭಾಷಾ ನಟಿಗೆ ಲೈಂಗಿಕ ಕಿರುಕಳ | ನಟ ದಿಲೀಪ್‌ ವಿರುದ್ಧ ಆರೋಪ ಪಟ್ಟಿ| ವಿಚಾರಣೆ ನಡೆಸಿದ ಎರ್ನಾಕುಲಂನಲ್ಲಿರುವ ಹೆಚ್ಚುವರಿ ವಿಶೇಷ ಸೆಷನ್ಸ್‌ ನ್ಯಾಯಾಲಯ

Kerala actress abduction case Charges framed against actor Dileep and Other accused

ಕೊಚ್ಚಿ[ಜ.07]: ಬಹುಭಾಷಾ ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಮಲಯಾಳಂ ನಟ ದಿಲೀಪ್‌ ಹಾಗೂ ಇತರ 9 ಮಂದಿ ಆರೋಪಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ.

ನಟಿ ಅಪಹರಣ ಪ್ರಕರಣ: ಮತ್ತೊಂದು ಸುದ್ದಿಯಲ್ಲಿ ನಟ ದಿಲೀಪ್

ಈ ಬಗ್ಗೆ ವಿಚಾರಣೆ ನಡೆಸಿದ ಎರ್ನಾಕುಲಂನಲ್ಲಿರುವ ಹೆಚ್ಚುವರಿ ವಿಶೇಷ ಸೆಷನ್ಸ್‌ ನ್ಯಾಯಾಲಯ, ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿತು. ಆದರೆ, ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. 2017ರ ಫೆಬ್ರವರಿಯಲ್ಲಿ ತನ್ನನ್ನು ಅಪಹರಣಗೈದು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ನಟಿ ಆರೋಪಿಸಿದ್ದರು.

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಪ್ರಮುಖ ಆರೋಪಿ ಪಲ್ಸರ್‌ ಸುನಿ ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು.

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ: ಖ್ಯಾತ ನಟ ಬಂಧನ

Latest Videos
Follow Us:
Download App:
  • android
  • ios