ಬೆಂಗಳೂರು[ಆ. 13] ತೆಲುಗು ಸ್ಟಾರ್ ಸಂಪೂರ್ಣೇಶ್ ಬಾಬು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹದ ಸುದ್ಧಿ  ನನ್ನ ಮನ ಕಲಕಿಬಿಟ್ಟಿತು, ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಕಗಳ ಕಾಲದಿಂದ ಆದರಿಸುತ್ತಾ ಬಂದಿರುವವರು  ಉತ್ತರ ಕರ್ನಾಟಕ ಜನ.  ನನ್ನನ್ನು ಸಹ 'ಹೃದಯಕಾಲೇಯಂ' ಚಿತ್ರದಿಂದ ಬಹಳ ಮೆಚ್ಚಿದ್ದೀರಿ, ಅದಕ್ಕೆ ನಾನು ಚಿರ ಋಣಿ, ಇತ್ತೀಚಿನ ಪ್ರವಾಹದ ಫೋಟೋಗಳನ್ನ ಮತ್ತು ಆ ಪ್ರಾಂತ್ಯದ ಜನರ ನೋವನ್ನು ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ ಎಂದು ನಾಯಕ ನಟ ನೊಂದು ನುಡಿದಿದ್ದಾರೆ.

ಕರ್ನಾಟಕದ ಪ್ರವಾಹ ಎಲ್ಲಿಗೆ ಬಂದು ನಿಂತಿದೆ?

ಈಗ ತೆಲುಗು ಚಿತ್ರ್ಯೋದ್ಯಮ ಕನ್ನಡದ ಪ್ರಜೆಗಳಿಗೆ ಸಹಾಯ ಮಾಡುವ ಸಮಯ ಬಂದಿದೆ, ನನ್ನ ಅಳಿಲು ಸೇವೆಯಾಗಿ 2,00,000 ರೂ.  ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.