ಹೈದರಾಬಾದ್[ಏ. 11]  ವಿವೇಕ್ ಓಬೇರಾಯ್ ಅಭಿನಯದ ನರೇಂದ್ರ ಮೋದಿ ಬಯೋಪಿಕ್ ಗೆ ಕೆಲ ದಿನಗಳ ಹಿಂದೆ ನಟಿ ಕಾಜಲ್ ಅಗರ್ ವಾಲ್ ಮೆಚ್ಚುಗೆ ಸೂಚಿಸಿದ್ದರು. ನಾನು ಈ ಸಿನಿಮಾ ನೋಡಲು ಕಾತರಳಾಗಿದ್ದು ವಿವೇಕ್ ಅವರಿಗೆ ಶುಭಾಶಯ ಎಂದು ಹೇಳಿದ್ದರು.

ಆದರೆ ಇದೆ ವಿಚಾರ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಓವ್ ವಿವೇಕ್ ಇದು ನಿಜಕ್ಕೂ ಅತ್ಯಂತ ನಂಬಲಾಗದ ರೀತಿ ಮೂಡಿಬಂದಿರುವ ಚಿತ್ರದಂತೆ ತೋರುತ್ತದೆ. ನಿಮ್ಮ ಇಡೀ ತಂಡಕ್ಕೆ ಶುಭಾಶಯ ಎಂದಿದಿದ್ದರು.

ಅಬ್ಬಬ್ಬಾ... ಕಾಜಲ್  ಇಷ್ಟೊಂದು ಬೋಲ್ಡಾ! ಟೀಸರ್ ನೋಡಲೇಬೇಡಿ

ಆದರೆ ಕೆಲವರು ಇದೆ ವಿಚಾರ ಇಟ್ಟುಕೊಂಡು ಕಾಜಲ್ ಅಗರ್ ವಾಲ್ ಆರ್ ಎಸ್ ಎಸ್ ಗೆ ಬೆಂಬಲ ಕೊಡುತ್ತಿದ್ದಾರೆ. ಆಲೆ ಒಬ್ಬಳು ‘ಸಂಘಿ’ ಎಂಬ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಆದರೆ ಕಾಜಲ್ ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.