Asianet Suvarna News Asianet Suvarna News

ವಿವಾದದ ಸ್ವರೂಪ ಪಡೆದ ನಾಟಕ : ಶಿವಮೊಗ್ಗದಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರದರ್ಶನಕ್ಕೆ ಅಡ್ಡಿ

  • ಶಿವಮೊಗ್ಗದ ರಂಗಬೆಳಕು ತಂಡದ ಕಲಾವಿದರಿಂದ ಪ್ರದರ್ಶನ ಜಯಂತ್ ಕಾಯ್ಕಿಣಿ  ರಚನೆ, ರಾಘು ಪುರಪ್ಪೆಮನೆ ನಿರ್ದೇಶನದ ಜೊತೆಗಿರುವನು ಚಂದಿರ ನಾಟಕ
  • ಸೊರಬ ತಾಲೂಕು ಆನವಟ್ಟಿಯಲ್ಲಿ ಪ್ರದರ್ಶನದ ವೇಳೆ ನಾಟಕಕ್ಕೆ ಅಡ್ಡಿ 
  • ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ' ಜೊತೆಗಿರುವವನು ಚಂದಿರ ನಾಟಕ
Jothegiruvvanu chandira play by Jayanth kaikine in Shivamogga stopped half way vcs
Author
Bangalore, First Published Jul 6, 2022, 11:40 AM IST | Last Updated Jul 6, 2022, 11:40 AM IST

ವರದಿ : ರಾಜೇಶ್ ಕಾಮತ್, ಶಿವಮೊಗ್ಗ

ಪ್ರಖ್ಯಾತ ಕವಿ, ಸಾಹಿತಿ ಜಯಂತ್ ಕಾಯ್ಕಿಣಿಯವರು ರಚನೆ ಮಾಡಿದ ರಾಘು ಪುರಪ್ಪೆಮನೆ  ನಿರ್ದೇಶನದ ಜೊತೆಗಿರುವನು ಚಂದಿರ ನಾಟಕ ಇದೀಗ ತೀವ್ರ ವಿವಾದದ ಸ್ವರೂಪ ಪಡೆಯುತ್ತಿದೆ. ಕೋಮು ಸೌಹಾರ್ದದ ಹೆಸರಿನಲ್ಲಿ ಪ್ರದರ್ಶನ ಗೊಳ್ಳುತ್ತಿದ್ದ ನಾಟಕವು ಕೋಮು ಸಾಮರಸ್ಯ ಕದಡುತ್ತದೆ ಎಂಬ ಆರೋಪಕ್ಕೆ ಗುರಿಯಾಗಿದೆ.  ಶಿವಮೊಗ್ಗ ರಂಗಬೆಳಕು ತಂಡದ ಕಲಾವಿದರು ಪಾತ್ರದಲ್ಲಿ ಕಾಣಿಸಿಕೊಂಡ ಜೊತೆಗಿರುವವನು  ಚಂದಿರ ಎಂಬ ನಾಟಕ ಪ್ರದರ್ಶನ  ಹಿಂದೂ ಪರ ಸಂಘಟನೆಗಳ ಆಕ್ರೋಶ ಕ್ಕೆ  ಕಾರಣವಾಗಿದೆ. ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ' ಜೊತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತಡೆಯೊಡ್ಡಿದ್ದರಿಂದ ಪ್ರದರ್ಶನ ಅರ್ಧಕ್ಕೆ ಮೊಟಕುಗೊಳಿಸಲಾಯಿತು . 

ಕನ್ನಡ ಸಾಹಿತ್ಯ ಪರಿಷತ್ , ಕರ್ನಾಟಕ ಜಾನಪದ ಪರಿಷತ್   ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ , ಸನ್ಮಾನ ಕಾರ್ಯಕ್ರಮದ ನಂತರ ಶಿವಮೊಗ್ಗ ರಂಗಬೆಳಕು ತಂಡದಿಂದ ಜತೆಗಿರುವನ ಚಂದಿರ ಎಂಬ ನಾಟಕ ಪ್ರದರ್ಶನ ಆರಂಭವಾಯಿತು . ಆಗ ಹಿಂದು ಪರ ಸಂಘಟನೆಯ ಮುಖಂಡರಾದ ಶ್ರೀಧರ್‌ ಆಚಾರ್ ಹಾಗೂ ಮಂಜುನಾಥ ಆನವಟ್ಟಿ ನಾಟಕ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿದರು . ಗಲಾಟೆ ಸಾಧ್ಯತೆ ಇರುವುದನ್ನು ಅರಿತ ಪೊಲೀಸರು ಮಧ್ಯ ಪ್ರವೇಶ ಮಾಡಿ ನಾಟಕ ಪ್ರದರ್ಶನವನ್ನು ಅರ್ಧಕ್ಕೆ ಮೊಟಕು ಮಾಡಿಸಿದರು . ನಂತರ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗುತ್ತ ಹೊರ ನಡೆದರು . ಭಾವೈಕ್ಯತೆ ಹೆಸರಿನಲ್ಲಿ ಲವ್ ಜಿವಾದ್ ಗೆ ಪ್ರೋತ್ಸಾಹ ನೀಡುವ ನಾಟಕಗಳು ಹಾಗೂ ವಿಚಾರಧಾರೆಗಳು ಸಮಾಜಕ್ಕೆ ಮಾರಕ ಹಾಗೂ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿದೆ . ಈಗಾಗಲೇ ಜಿಹಾದಿ ಮನಸ್ಥಿತಿಯ ದುಷ್ಕರ್ಮಿಗಳು ದೇಶದಲ್ಲಿ ಕುಕೃತ್ಯವನ್ನು ಎಸಗುತ್ತಿದ್ದಾರೆ . ಆದ್ದರಿಂದ ಹಿಂದುಗಳನ್ನು ಸಾಮರಸ್ಯದ ಹೆಸರಿನಲ್ಲಿ ಧರ್ಮಾಂತರ ಮಾಡುವ ಹಾಗೂ ದೇಶದ್ರೋಹಿಗಳನ್ನು ಹುಟ್ಟುಹಾಕುವ ಇಂತಹ ವಿಚಾರಧಾರೆಗಳು ಇಲ್ಲಿಗೆ ನಿಲ್ಲಬೇಕು ಎಂದು ನಾಟಕ ಪ್ರದರ್ಶನಕ್ಕೆ ತಡೆ ಒಡ್ಡಲಾಯಿತು ಎಂದು ಶ್ರೀಧರ್ ಆಚಾರ್‌ ಮಾಹಿತಿ ನೀಡಿದ್ದಾರೆ. 

ಶಿವಮೊಗ್ಗದ ರಂಗಬೆಳಕು ತಂಡದ ಕಲಾವಿದರು ಜಯಂತ್ ಕಾಯ್ಕಿಿಣಿ ಅವರ ರಚನೆ, ರಾಘು ಪುರಪ್ಪೆಮನೆ ಅವರ ನಿರ್ದೇಶನದ ಜೊತೆಗಿರುವನು ಚಂದಿರ ನಾಟಕವನ್ನು ಸೊರಬ ತಾಲೂಕು ಆನವಟ್ಟಿಿಯಲ್ಲಿ ಪ್ರದರ್ಶಿಸುತ್ತಿದ್ದ ವೇಳೆ ನಾಟಕಕ್ಕೆ ಅಡ್ಡಿ ಪಡಿಸಿ, ಅರ್ಧಕ್ಕೆ ನಿಲ್ಲಿಸಿದ ಘಟನೆಯನ್ನು ಶಿವಮೊಗ್ಗದ ಹವ್ಯಾಾಸಿ ರಂಗಕಲಾವಿದರ ಒಕ್ಕೂಟವು ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಡೆಯೊಡ್ಡಿರುವುದು ಸಮಾಜದ ಸ್ವಾಸ್ಥ್ಯ ದ ಮೇಲೆ ನಡೆದ ಹಲ್ಲೆಯಾಗಿದೆ.  ಕೆಲವರ ಇಂತಹ ಕಿಡಿಗೇಡಿ ಕೃತ್ಯದಿಂದ ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯವುದು ಅಸಾಧ್ಯ ವಾಗಬಹುದು. ಆದ್ದರಿಂದ ಆಡಳಿತ ಸರ್ಕಾರ ಈ ಬಗ್ಗೆ ಬಿಗಿ ನಿಲುವು ತಾಳಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದಿದೆ. ಸಭೆಯಲ್ಲಿ ಕಲಾವಿದರು ಒಕ್ಕೂಟದ ಅದ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ, ಪ್ರಧಾನ ಕಾರ್ಯದರ್ಶಿ ಲವ ಜಿ.ಆರ್., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಾಧ್ಯಕ್ಷ ಡಿ. ಮಂಜುನಾಥ್,  ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಹರಿಗೆ ಗೋಪಾಲಸ್ವಾಾಮಿ, ಲೇಖಕಿ ಅಕ್ಷತಾ ಹುಂಚದಕಟ್ಟೆ, ವಕೀಲ ಕೆ.ಪಿ. ಶ್ರೀಪಾಲ್, ರಂಗಕರ್ಮಿಗಳಾದ ಡಾ. ಸಾಸ್ವೆಹಳ್ಳಿ ಸತೀಶ್, ಡಾ. ಕೆ.ಜಿ. ವೆಂಕಟೇಶ್, ಹೊನ್ನಾಾಳಿ ಚಂದ್ರಶೇಖರ್, ಸುಧೀಂದ್ರ ರಾವ್, ಮಂಜುನಾಥ ಸ್ವಾಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಿವಮೊಗ್ಗದ ರಂಗಕಲಾವಿದರು, ಸಾಹಿತಿಗಳು, ಚಿಂತಕರು ಖಂಡನಾ ಸಭೆಯನ್ನು ನಡೆಸಿ ಹಲವು ನಿರ್ಣಯ ಕೈಗೊಂಡರು.

Latest Videos
Follow Us:
Download App:
  • android
  • ios