Asianet Suvarna News Asianet Suvarna News

ರಾಹುಲ್ ಕುಹಕವಾಡಿದ್ದ ವಂದೇ ಮಾತರಂ ರೈಲು ಯಶಸ್ವಿ ಸಂಚಾರ!

ಸ್ವದೇಶಿ ನಿರ್ಮಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆರಂಭವಾದ ವರ್ಷದಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದು, ತನ್ನೆಲ್ಲ ವೆಚ್ಚವನ್ನೂ ಭರಿಸುವಷ್ಟು ಶಕ್ತಿ ಪಡೆದಿದೆ. ಆ ಮೂಲಕ ಸ್ವದೇಶಿ ನಿರ್ಮಿತ ಹೆಚ್ಚಿನ ರೈಲು ನಿರ್ಮಾಣಕ್ಕೆ ಮನಸ್ಸು ಮಾಡಲು ಭಾರತಕ್ಕೆ ಎಲ್ಲಿಲ್ಲದ ವಿಶ್ವಾಸ ಬಂದಾಂತಾಗಿದೆ.

indigenous semi high speed train Vande Bharat to pay itself in a year
Author
Bengaluru, First Published Jun 21, 2019, 10:27 AM IST

ನವದೆಹಲಿ (pg.21): ಸಂಪೂರ್ಣ ಸ್ವದೇಶಿ ನಿರ್ಮಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಭಾರತೀಯ ರೈಲ್ವೆಯ ಪಾಲಿಗೆ ಭರ್ಜರಿ ಯಶಸ್ಸನ್ನು ತಂದುಕೊಂಡುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಕಾರಣ, ರೈಲು ನಿರ್ಮಾಣಕ್ಕೆ ಮಾಡಿದ ವೆಚ್ಚ ಕೇವಲ 12-15 ತಿಂಗಳಲ್ಲಿ ರೈಲ್ವೆಗೆ ಮರಳಿ ಬರುವ ಸೂಚನೆಗಳು ಕಂಡುಬಂದಿವೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಸದಸ್ಯ ರಾಜೇಶ್‌ ಅಗರ್‌ವಾಲ್‌, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಿರ್ಮಾಣಕ್ಕೆ ಅಂದಾಜು 100 ಕೋಟಿ ರು.ವೆಚ್ಚ ಮಾಡಲಾಗಿತ್ತು. ನವದೆಹಲಿ ಮತ್ತು ವಾರಾಣಸಿ ನಡುವೆ ವಾರಕ್ಕೆ 5 ದಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದೆ.

ವಂದೇ ಭಾರತ್ ಟೀಕಿಸಿದ ರಾಹುಲ್‌ಗೆ ತಿರುಗೇಟು ನೀಡಿದ ಮೋದಿ

ಜೊತೆಗೆ ಎಲ್ಲಾ 5 ದಿನಗಳಲ್ಲೂ ರೈಲು ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರಿಂದ ತುಂಬಿರುತ್ತಿದೆ. ಇತರೆ ರೈಲುಗಳಲ್ಲಿ ಇರುವ ಯಾವುದೇ ರಿಯಾಯಿತಿ ಈ ರೈಲುಗಳಲ್ಲಿ ಇರುವುದಿಲ್ಲ. ಅಲ್ಲದೆ ಇತರೆ ರೈಲಿನ ಟಿಕೆಟ್‌ ದರಕ್ಕಿಂತ ಇದರ ದರವೂ ಸ್ವಲ್ಪ ಹೆಚ್ಚಿದೆ. ಹೀಗಾಗಿ ರೈಲು ಮಾಸಿಕ 7 ಕೋಟಿ ರು. ಆದಾಯ ಸಂಗ್ರಹಿಸುತ್ತಿದೆ. ಇದೇ ರೀತಿ ರೈಲಿನ ಆದಾಯ ಸಂಗ್ರಹ ಮುಂದುವರೆದರೆ 12-15 ತಿಂಗಳಲ್ಲಿ ರೈಲಿಗೆ ಮಾಡಿದ ವೆಚ್ಚ ಪೂರ್ಣ ಪ್ರಮಾಣದಲ್ಲಿ ಮರಳಲಿದೆ ಎಂದು ಅಗರ್‌ವಾಲ್‌ ಹೇಳಿದ್ದಾರೆ.

ಕೆಟ್ಟು ನಿಂತ ಭಾರತದ ಅತೀ ವೇಗದ ರೈಲಿಗೇನಾಗಿತ್ತು?

ವಂದೇ ಭಾರತ್‌ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

indigenous semi high speed train Vande Bharat to pay itself in a year

Follow Us:
Download App:
  • android
  • ios