ಬೆಂಗಳೂರು(ಸೆ. 23)  ಕಿಚ್ಚ ಸುದೀಪ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡುವ ಯತ್ನ ನಡೆದಿದೆಯೇ? ಹೀಗೊಂದು ಪ್ರಶ್ನೆ ಮೂಡಿದೆ.  ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳು.

ಕಿಚ್ಚ ಸುದೀಪ್ ಅವರ ಟ್ವೀಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ.. ಇಂದು ಮಧ್ಯಾಹ್ನ ಮೂರು ಗಂಟೆಯಿಂದ ಸುಮಾರು ಏಳು ಸಲ ಸುದೀಪಣ್ಣನ ಟ್ವೀಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ. Password Reset Request ದೀಪಣ್ಣನ mail ಗೆ ಬಂದಿವೆ  ಎಂದು ಸುದೀಪ್ ಸಾಂಸ್ಕೃತಿಕ ಪರಿಷತ್ ಎಂಬ ಖಾತೆ ಟ್ವೀಟ್ ಮಾಡಿದ್ದು ಬೆಂಗಳೂರು ಸೈಬರ್ ಪೊಲೀಸರು ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸುದೀಪ ಏನೋ ಮಾತಾಡ್ತಿದ್ದಾರೆ ಕೇಳಿಸಿಕೊಂಡ್ರಾ? ಬಳೆ, ಸರ, ಕಡಗದಾಚೆ ಓದಿಕೊಳ್ಳಿ

ಪೈಲ್ವಾನ್ ಚಿತ್ರ ಬಿಡುಗಡೆಯಾದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲ ಒಂದು ಚರ್ಚೆ ಸ್ಯಾಂಡಲ್ ವುಡ್ ಬಗ್ಗೆ ನಡೆಯುತ್ತಲೇ ಇದೆ. ಈ ನಡುವೆ ಸುದೀಪ್ ಟ್ವಿಟರ್ ಖಾತೆ ಹ್ಯಾಕ್ ಮಾಡಲು ಪ್ರಯತ್ನ ಮಾಡಲಾಗಿದೆ ಎಂಬ ಆತಂಕಕಾರಿ ಅಂಶವು ಬಹಿರಂಗವಾದಂತೆ ಆಗಿದೆ.