Asianet Suvarna News Asianet Suvarna News

ಫಿಲ್ಮ್‌ ಚೇಂಬರ್‌ನ ಮತ ಎಣಿಕೆ ಪಾರದರ್ಶಕವಾಗಿಲ್ಲ: ಸಾ.ರಾ.ಗೋವಿಂದು

‘ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ನಾವು ದಾಖಲೆಗಳನ್ನು ಕೇಳುತ್ತಿದ್ದೇವೆಯೇ ಹೊರತು ಅಧಿಕಾರಕ್ಕೆ ಅಡ್ಡಿಪಡಿಸುವುದು ಅಥವಾ ಮರು ಚುನಾವಣೆ, ಮರು ಮತ ಎಣಿಕೆ ಮಾಡಬೇಕೆಂದು ಕೇಳುತ್ತಿಲ್ಲ’ ಎಂದು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿದ್ದಾರೆ.

Film Chambers vote counting is not transparent says sa ra govindu gvd
Author
Bangalore, First Published Aug 5, 2022, 3:13 PM IST

ಬೆಂಗಳೂರು (ಆ.05): ‘ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ನಾವು ದಾಖಲೆಗಳನ್ನು ಕೇಳುತ್ತಿದ್ದೇವೆಯೇ ಹೊರತು ಅಧಿಕಾರಕ್ಕೆ ಅಡ್ಡಿಪಡಿಸುವುದು ಅಥವಾ ಮರು ಚುನಾವಣೆ, ಮರು ಮತ ಎಣಿಕೆ ಮಾಡಬೇಕೆಂದು ಕೇಳುತ್ತಿಲ್ಲ’ ಎಂದು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಮತ ಎಣಿಕೆ ಸೂಕ್ತ ರೀತಿಯಲ್ಲಿ ನಡೆದಿಲ್ಲ. ಹೀಗಾಗಿ ಎಷ್ಟುಮತಗಳು ಚಲಾವಣೆ ಆಗಿವೆ.

ಗೆದ್ದವರಿಗೆ ಎಷ್ಟುಮತ, ಸೋತವರಿಗೆ ಎಷ್ಟುಮತಗಳು ಬಂದಿವೆ ಹಾಗೂ ಬ್ಯಾಲೆಟ್‌ ಸೀಟ್‌ನ ಕೌಂಟರ್‌ ಫೈಲ್‌, ಸಿಸಿಟೀವಿ ಫೂಟೇಜ್‌ಗಳನ್ನು ಕೇಳಿದ್ದೇವೆ. ಚುನಾವಣೆಯಲ್ಲಿ ಗೆದ್ದವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ನಾವು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರು ನೀಡಿದೆವು. ಜಿಲ್ಲಾ ನೋಂದಣಿ ಅಧಿಕಾರಿಗಳು ಕೂಡ ದೂರುದಾರರು ಕೇಳಿರುವ ಮಾಹಿತಿಗಳನ್ನು ಒದಗಿಸುವಂತೆ ವಾಣಿಜ್ಯ ಮಂಡಳಿಗೆ ಮೂರು ಬಾರಿ ಆದೇಶ ನೀಡಿದ್ದರೂ ಆ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ಆ ಕಾರಣಕ್ಕೆ ಈಗ ನಾವು ಕೋರ್ಟ್‌ಗೆ ಹೋಗಬೇಕಾಯಿತು’ ಎಂದು ಹೇಳಿದರು.

Karnataka Film Chamber Of Commerce: ಫಿಲಂ ಚೇಂಬರ್‌ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಜಯಸಿಂಹ ಮುಸುರಿ, ‘ಚುನಾವಣೆಯಲ್ಲಿ ನಾವು ಸೋತಿದ್ದೇವೆ, ನಿಜ. ಆದರೆ, ಸೋತ ಮಾತ್ರಕ್ಕೆ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳನ್ನು ಪ್ರಶ್ನೆ ಮಾಡಬಾರದು ಅಂತೇನಿಲ್ಲ. ಇದನ್ನು ಸೋತವರ ಹತಾಶಯ ನಡೆ, ಚುನಾವಣೆಯಲ್ಲಿ ಗೆದ್ದವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ನಮ್ಮ ಮೇಲೆಯೇ ಮಾಡುತ್ತಿದ್ದಾರೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. 

ನಾವು ಕೇಳಿದ ಮಾಹಿತಿಗಳನ್ನು ಕೊಡದೆ ಹೋಗಿದ್ದಕ್ಕೆ ಕಾನೂನಿನ ಮೊರೆ ಹೋಗಿದ್ದೇವೆ. ಮುಂದಿನ ಆದೇಶ ಅಥವಾ ವಿಚಾರಣೆ ನಡೆಯುವವರೆಗೂ ವಾಣಿಜ್ಯ ಮಂಡಳಿಯಲ್ಲಿ ಯಾವುದೇ ರೀತಿ ಆಡಳಿತಾತ್ಮಕ ವ್ಯವಹಾರಗಳು ನಡೆಸಬಾರದು ಎಂದು ಜಿಲ್ಲಾ ನೋಂದಣಿ ಅಧಿಕಾರಿಗಳೇ ಅದೇಶ ನೀಡಿದ್ದಾರೆ’ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಂ.ವೀರೇಶ್‌, ಕರಿಸುಬ್ಬು, ಟೇಶಿ ವೆಂಕಟೇಶ್‌, ಎ.ಗಣೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಮುಖ ನಿರ್ಧಾರ ಕೈಗೊಳ್ಳದಂತೆ ಫಿಲ್ಮ್‌ ಚೇಂಬರ್‌ಗೆ ಹೈಕೋರ್ಟ್‌ ತಡೆ: ಸಂಘದ ಬೈಲಾ ಪ್ರಕಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯದಿರುವುದರಿಂದ ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಧ್ಯಂತರ ಆದೇಶ ನೀಡಲಾಗಿದೆ. ವಾಣಿಜ್ಯ ಮಂಡಳಿಗೆ ಜೂನ್‌ 28ರಂದು ನಡೆದ ಚುನಾವಣೆಯಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಸಾ.ರಾ.ಗೋವಿಂದು, ಬಿ.ಕೆ.ಜಯಸಿಂಹ ಮುಸುರಿ, ರಮೇಶ್‌ ಕಶ್ಯಪ್‌, ಕೆ.ಎಂ.ವೀರೇಶ್‌ ಅವರು ಸಹಕಾರ ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರು ನೀಡಿದ್ದರು. 

Karnataka Film Chamber Of Commerce: ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂಗೆ ಚಿತ್ರರಂಗದಿಂದ ಧನ್ಯವಾದ

ಈ ದೂರಿನ ಮೇರೆಗೆ ವಿಚಾರಣೆ ನಡೆಸಿರುವ ಜಿಲ್ಲಾ ನೋಂದಣಿ ಅಧಿಕಾರಿಗಳು ಸದರಿ ದೂರಿನ ಅರ್ಜಿ ಇತ್ಯರ್ಥ ಆಗುವವರೆಗೂ ಹಾಗೂ ಮುಂದಿನ ನಿರ್ದೇಶನದವರೆಗೆ ವಾಣಿಜ್ಯ ಮಂಡಳಿಗೆ ಸಂಬಂಧಿಸಿದಂತೆ ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ಕೈಗೊಳ್ಳುವಂತಿಲ್ಲ ಎಂದು ಮಂಡಳಿಗೆ ಮಧ್ಯಂತರ ನಿರ್ದೇಶನ ಜಾರಿ ಮಾಡಿದ್ದಾರೆ. ಜೂ.28ರಂದು ನಡೆದ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಂರಕ್ಷಿಸಡಬೇಕು. ವಿಡಿಯೋ, ಸಿಸಿಟಿವಿ ದೃಶ್ಯಗಳು, ಚುನಾವಣೆ ಬ್ಯಾಲೆಟ್‌ ಪೇಪರ್‌ ಹೀಗೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆ, ಮಾಹಿತಿಗಳನ್ನು ಸಂರಕ್ಷಿಸಿಡಲು ಆದೇಶಿಸಲಾಗಿದೆ.

Follow Us:
Download App:
  • android
  • ios