ಮುದ್ದೇಬಿಹಾಳ(ಫೆ. 10)  ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿಮಿತ್ತ ವಿಜಯಪುರಕ್ಕೆ ತೆರಳಿದ್ದರು.  ಆದರೆ ಅಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಚಲನಚಿತ್ರ ನಿರ್ದೇಶಕ ಕಲಂದರ ದೊಡಮನಿ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಲಾ ಜಾತ್ರೆ ಕಾರ್ಯಕ್ರಮದಲ್ಲಿ ಅನುಶ್ರೀಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು.

ಅನುಶ್ರೀ ಒಂದು ದಿನದ ಸಂಭಾವನೆ ಎಷ್ಟು?

ಅನುಶ್ರೀ ವೇದಿಕೆಗೆ ಬರುತ್ತಿದ್ದಂತೆಯೇ ಮುಗಿಬಿದ್ದು ಸೆಲ್ಫಿಮತ್ತು ಆಟೋಗ್ರಾಫ್ ಪಡೆದುಕೊಳ್ಳುವಲ್ಲಿ ಮುಂದಾದರು. ಈ ವೇಳೆ ತಳ್ಳಾಟ-ನೂಕಾಟ ನಡೆದು ಅಂತಿಮವಾಗಿ ಪೊಲೀಸರು ಮತ್ತು ಗಾರ್ಡ್ ಗಳು ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿತು.

ಹರಸಾಹಸ ಮಾಡಿ ಅನುಶ್ರೀ ಸುತ್ತ ನೆರೆದಿದ್ದವರನ್ನು ಚದುರಿಸಲಾಯಿತು. ಬಿಗಿ ಭದ್ರತೆಯಲ್ಲಿ ಅನುಶ್ರೀ ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಿ ಕಳುಹಿಸಲಾಯಿತು.