ಬೆಂಗಳೂರು[ಸೆ. 16]  ಬಿಗ್ ಬಾಸ್ ಕನ್ನಡಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 2 ನೇ ವಾರದಿಂದ ರಿಯಾಲಿಟಿ ಶೋ ಪ್ರಸಾರ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬಿಗ್ ಬಾಸ್ ಪ್ರೋಮೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಈ ಸಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವವರು ಯಾರು?

ಈ ಬಾರಿ ದೊಡ್ಡ ಮನೆಗೆ ಕೇವಲ ಸೆಲೆಬ್ರಿಟಿಗಳಿಗೆ ಅವಕಾಶ.. ಅಂದರೆ ಕಳೆದ ಸೀಸನ್ ರೀತಿ ಸಾಮಾನ್ಯರಿಗೆ ಪ್ರವೇಶ ಇಲ್ಲ ಎನ್ನಲಾಗಿದೆ. 15 ಸ್ಪರ್ಧಿಗಳು ಮೊದಲು ಮನೆಗೆ ಎಂಟ್ರಿ ಕೊಡಲಿದ್ದು ನಿಧಾನವಾಗಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತಷ್ಟು ಜನ ಮನೆ ಪ್ರವೇಶ ಮಾಡಬಹುದು.

ಆಕರ್ಷಕ ಬಿಗ್ ಬಾಸ್ ಪ್ರೋಮೋ ನೋಡಿದ್ದೀರಾ?

ಹಾಗಾದರೆ ಮನೆ ಸೇರಲಿರುವ ಆ 15 ಸೆಲೆಬ್ರಿಟಿಗಳು ಯಾರು? ವಾಹಿನಿ ಈ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಪ್ರಕಟಣೆ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಅನೇಕರ ಹೆಸರು ಹರಿದಾಡಲು  ಆರಂಭಿಸಿದೆ.

ನಟಿ ಶರ್ಮಿಳಾ ಮಾಂಡ್ರೆ, ಅಮೂಲ್ಯ ಕಿರುತೆರೆಯ ನೇಹಾ ಗೌಡ ಸೇರಿದಂತೆ ಕೆಲ ಟಿಕ್ ಟಾಕ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜತೆಗೆ ಕಲರ್ಸ್ ವಾಹಿನಿಯ ಕನ್ನಡ ಕೋಗಿಲೆಯಲ್ಲಿ ಪಾಲ್ಗೊಂಡ ಕೆಲವರಿಗೂ ಕರೆ ಹೋಗಿದೆ ಎನ್ನಲಾಗಿದೆ.