ಜೆಎನ್‌ಯುಗೆ ಹೋಗಿದ್ದ ದೀಪಿಕಾ ಖಾತೆಗೆ 5 ಕೋಟಿ ರೂ.?: ನಟಿ ವಿರುದ್ಧ ಭುಗಿಲೆದ್ದ ಆಕ್ರೋಶ!
ಜೆಎನ್‌ಯು ಪ್ರತಿಭಟನೆಯಲ್ಲಿ ಭಾಗಿಯಾದ ದೀಪಿಕಾ ಖಾತೆಗೆ ಐದು ಕೋಟಿ ರೂ?| ಹತ್ತು ನಿಮಿಷ ಭಾಗಿಯಾಗಿದ್ದಕ್ಕೆ ಪಾಕಿಸ್ತಾನ ಮೂಲದಿಂದ ದೀಪಿಕಾಗೆ ಬಂತಾ ಹಣ?| ಟ್ವಿಟ್‌ನಲಲ್ಲಲಿ ನಟಿ ವಿರುದ್ಧ ಭುಗಿಲರೆದ್ದ ಆಕ್ರೋಶ
ಮುಂಬೈ(ಜು.29) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಗಾಗ ವಿವಾದಕ್ಕೊಳಪಡುತ್ತಾರೆ. ಸದ್ಯ ದೀಪಿಕಾಗೆ ಸಂಬಂಧಿಸಿದ ಜೆಎನ್‌ಯು ವಿವಾದ ಮತ್ತೆ ಸೌಂಡ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲೂ ಭಾರೀ ಟ್ರೆಂಡ್ ಸೃಷ್ಟಿಸಿದ್ದು, ನಟಿಯನ್ನು ಬಂಧಿಸುವಂತೆ ಕೂಗೆದ್ದಿದೆ. ದೀಪಿಕಾ ವಿರುದ್ಧ ಟ್ವೀಟ್ ಮಾಡಲಾಗುತ್ತಿದ್ದು, ಅನೇಕ ಮಂದಿ ದೀಪಿಕಾರನ್ನು 'ಭಯೋತ್ಪಾದಕಿ' ಎಂದು ಕರೆದಿದ್ದಾರೆ. ಅಷ್ಟಕ್ಕೂ ಈ ಹೊಸ ವಿವಾದವೇನು? ಟ್ವಿಟರ್‌ನಲ್ಲಿ #Deepika ಟ್ರೆಂಡ್ ಯಾಕಾಗಿದೆ? ಇಲ್ಲಿದೆ ವುವರ
ಇದು ಈಗಿನ ವಿಚಾರವಲ್ಲ, ಈ ವರ್ಷದ ಆರಮಭದಲ್ಲಿ ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಭಾರೀ ಆಕ್ರೋಶವಿತ್ತು. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಜನವರಿ 5 ರಂದು ಪ್ರತಿಭಟನೆಗಳು ನಡೆದಿತ್ತು. ಈ ವಿಚಾರ ಭಾರೀ ಗಂಭೀರ ಸ್ವರಪ ಪಡೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯ ರಸ್ತೆಗಿಳಿದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.
ಪ್ರಭಾಸ್‌ಗೆ ಜೊತೆ ನಟಿಸಲು ದೀಪಿಕಾ ಕೇಳಿದ್ರು ಭಾರೀ ಸಂಭಾವನೆ..! ಇವರೇ ಹೈಯೆಸ್ಟ್ ಫೇಯ್ಡ್ ನಟಿ
ಹೀಗಿರುವಾಗ ಜನವರಿ 7 ರಂದು ಸಂಜೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಆವರಣಕ್ಕೆ ತಲುಪಿದ್ದರು. ಸುಮಾರು ಹತ್ತು ನಿಮಿಷ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಯಾವುದೇ ಮಾತುಗಳಾಗಲೀ ಘೋಷಣೆಗಳಾಗಲೀ ಕೂಗಿರಲಿಲ್ಲ. ಬಳಿಕ ಅವರು ಅಲ್ಲಿಂದ ತೆರಳಿದ್ದರು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಆರೋಪ ಕೇಳಿ ಬಂದಿದ್ದು, ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ದೀಪಿಕಾ ಬರೋಬ್ಬರಿ ಐದು ಕೋಟಿ ಪಡೆದಿದ್ದರೆಂದು ಕೇಳಿ ಬಂದಿದೆ.
ಈ ಸುದ್ದಿಯೊಂದಿಗೆ ಈ ಹಣ ಪಾಕಿಸ್ತಾನದಿಂದ ನೀಡಲಾಗಿದೆ ಎಂಬುವುದೂ ಭಾರೀ ಸದ್ದು ಮಾಡಿದೆ. ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ದೀಪಿಕಾ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ದೀಪಿಕಾ ಖಾತೆ ಟ್ಯಾಗ್ ಮಾಡಿ ಜನರು ಅವರ ವಿರುದ್ಧ ಟ್ವೀಟ್ ಮಾಡಲಾರಂಭಿಸಿದ್ದಾರೆ. ಆದರೆ ಈವರೆಗೂ ಈ ಸಂಬಂಧ ಯಾವುದೇ ಅಧಿಕೃತ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿಲ್ಲ.
35 ಸಾವಿರ ಸಲ ಅರ್ಲಾಮ್ ಸ್ನೂಝ್ ಮಾಡಿದ ರಣವೀರ್: ದೀಪಿಕಾ ಮಾಡಿದ್ದೇನು..?
ವ್ಯಕ್ತಿಯೊಬ್ಬ ಜೆಎನ್‌ಯು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲು ಐದು ಕೋಟಿ ರೂ. ಪಡೆದಿದ್ದರು. ಇದು ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಪಾಕಿಸ್ತಾನದವರು ನಮ್ಮ ಜೆಎನ್‌ಯು ಬದಲು ತಮ್ಮ ದೇಶದ ಯೂನಿವರ್ಸಿಟಿ ಅಭಿವೃದ್ಧಿಪಡಿಸಲು ಹಣ ವ್ಯಯಿಸಬೇಕು. ದೀಪಿಕಾರನ್ನು ಕೂಡಲೇ ಬಂಧಿಸಬೇಕೆಂದು ಟ್ವೀಟ್ ಮಾಡಿದ್ದಾರೆ.