ನವದೆಹಲಿ[ಮೇ.18]: ಭಾರತೀಯರ ಕಪ್ಪು ಹಣ ಕುರಿತಂತೆ ಸ್ವಿಜರ್ಲೆಂಡ್‌ನಿಂದ ಬಂದಿರುವ ಮಾಹಿತಿಯನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಕುರಿತು ಪತ್ರಕರ್ತರೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರ ನೀಡಿರುವ ಕೇಂದ್ರ ವಿತ್ತ ಸಚಿವಾಲಯ, ‘ಈಗಾಗಲೇ ಕೈಗೊಳ್ಳಲಾದ ಪ್ರಕರಣಗಳ ತನಿಖೆಗಳಿಗೆ ಅನುಗುಣವಾಗಿ ಭಾರತ ಮತ್ತು ಸ್ವಿಜರ್ಲೆಂಡ್‌ ಸರ್ಕಾರಗಳು ಕಪ್ಪು ಹಣದ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿವೆ.

ಅಲ್ಲದೆ, ಇವುಗಳು ಗೌಪ್ಯತೆಯ ಷರತ್ತುಗಳಿಗೆ ಒಳಪಟ್ಟಿರುವುದರಿಂದ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ. ಅಲ್ಲದೆ, ‘2018 ಹಾಗೂ ಅದರ ನಂತರದ ವರ್ಷಗಳಲ್ಲಿ ಸ್ವಿಜರ್ಲೆಂಡ್‌ನಲ್ಲಿರುವ ಭಾರತೀಯರು ಹೊಂದಿರುವ ಹಣಕಾಸು ಮಾಹಿತಿಗಳನ್ನು ಸ್ವಿಸ್‌ ಸರ್ಕಾರದಿಂದ ಭಾರತ ಪಡೆಯಲಿದೆ.

2019ರ ನಂತರ ಈ ಕುರಿತು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಆರ್‌ಟಿಐ ಅರ್ಜಿಗೆ ಸಚಿವಾಲಯ ಉತ್ತರಿಸಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.