- ಸುಧಾಕರ ದರ್ಬೆ

ಮೋರ್ಟ್‌ ಅವರು 1956ರಲ್ಲಿ ‘ಮ್ಯಾಡ್‌’ ಪತ್ರಿಕೆಗೆ ಸೇರುವ ಮೊದಲೇ ‘ಡಿ.ಸಿ.’ ಕಾಮಿಕ್ಸ್‌ನಲ್ಲಿ (ಡಿಟೆಕ್ಟಿವ್‌ ಕಾಮಿಕ್ಸ್‌- ಬ್ಯಾಟ್‌ಮ್ಯಾನ್‌, ಸೂಪರ್‌ಮ್ಯಾನ್‌, ಮುಂತಾದ ಪತ್ತೇದಾರಿ ಕಾಮಿಕ್ಸ್‌ ಸರಣಿಗೆ ಪ್ರಖ್ಯಾತಿ) ಕೆಲವು ವರ್ಷ ಪೊ›ಡಕ್ಷನ್‌ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.

ಮ್ಯಾಡ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಅವರ ವ್ಯಂಗ್ಯಚಿತ್ರಗಳಿಂದಾಗಿ ಜನಪ್ರಿಯರಾಗಿದ್ದದ್ದಷ್ಟೇ ಅಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದರು. 70-80ರ ದಶಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದ ಈ ಪತ್ರಿಕೆ ಇಲ್ಲೂ ದೊರಕುತ್ತಿತ್ತು. ಹೊಸ ಸಂಚಿಕೆಗೆ ಇಂಡಿಯನ್‌ ರುಪಿಯಲ್ಲಿ ಹೆಚ್ಚು ತೆರಬೇಕಾಗಿದ್ದರಿಂದ ಮೈಸೂರು ಬ್ಯಾಂಕ್‌, ಅವೆನ್ಯೂ ರಸ್ತೆ ಮತ್ತು ಬಳೆಪೇಟೆ ಮುಂತಾದ ಓಲ್ಡ್‌ ಪೇಪರ್‌ ಮಾರ್ಟ್‌ಗಳಲ್ಲಿ ಹಲವಾರು ಕಲಾವಿದರು, ವ್ಯಂಗ್ಯಚಿತ್ರಕಾರರು, ಪತ್ರಿಕಾ ಕಲಾವಿದರು ಕಡಿಮೆ ಬೆಲೆಗೆ ಹಳೆಯ ಸಂಚಿಕೆಯನ್ನು ಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದದ್ದು ಇದರಲ್ಲಿ ಪ್ರಕಟಗೊಳ್ಳುತ್ತಿದ್ದ ಸರ್ವಶ್ರೇಷ್ಠ ಗುಂಪು ವ್ಯಂಗ್ಯಚಿತ್ರ ಹಾಗೂ ವಿಶಿಷ್ಟಶೈಲಿಯ ಕ್ಯಾರಿಕೇಚರ್‌ಗಳಿಗೋಸ್ಕರ.

ಕಲಾವಿದ, ಭಿತ್ತಿಚಿತ್ರ ರಚನೆಕಾರ ಮತ್ತು ವಾಸ್ತುಶಿಲ್ಪಿ ಸತೀಶ್‌ ಗುಜ್ರಾಲ್‌ಗೆ ನುಡಿ ನಮನ

70ರ ದಶಕದಲ್ಲಿ ಹಾಲಿವುಡ್‌ ನಟರ ಮಟ್ಟದಲ್ಲಿ ಜನಪ್ರಿಯಗೊಂಡಿದ್ದರು. ಇವರು ರಚಿಸಿದ ಚಿತ್ರಗಳ ಜನಪ್ರಿಯ ಪಾತ್ರಗಳು ಮುಂದೆ ಹಲವಾರು ಟಿ.ವಿ. ಶೋ, ಸಿನಿಮಾಗಳಲ್ಲೂ ಕಾಣಿಸಿಕೊಂಡು ಜನಪ್ರಿಯವಾಯಿತು. ಆರಂಭದಲ್ಲಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದ ಡ್ರಕ್ಕರ್‌ ಮುಂದೆ ಡ್ರಾಯಿಂಗ್‌ ರಚನೆಯಲ್ಲಿ ಹೆಚ್ಚು ಪಳಗಿದ್ದರಿಂದ ತಮ್ಮನ್ನು ತಾವು ಕ್ಯಾರಿಕೇಚರ್‌ ಆರ್ಟ್‌ ರಚನೆಗೆ ಮಿತಿಗೊಳಿಸಿಕೊಂಡು ಅದರಲ್ಲಿಯೇ ಮುಂದುವರಿದರು. ಹಲವಾರು ಸಿನಿಮಾ ಜಾಹಿರಾತು ವಿನ್ಯಾಸ ಕೂಡ ರಚಿಸಿದ್ದರು.

ಕೊರೋನಾ ವೈರಸ್‌ ನುಂಗೇ ಬಿಡ್ತು 'Star Wars'ನಟನ ಜೀವವನ್ನ!

ಜನಿಸಿದ್ದು ಬೋಸ್ಟನ್‌ನಲ್ಲಿ 1929ರ ಮಾಚ್‌ರ್‍ 22ರಂದು. ಬೋಸ್ಟನ್‌ ವಿಶ್ವವಿದ್ಯಾಲಯದ ಗೌ. ಡಾಕ್ಟರೇಟ್‌, ವಿಲ್‌ ಈನ್ಸರ್‌ ಹಾಲ್‌ ಆಫ್‌ ಫೇಮ್‌ ಪ್ರಶಸ್ತಿ, ಅಮೆರಿಕನ್‌ ನ್ಯಾಷನಲ್‌ ಕಾರ್ಟೂನಿಸ್ಟ್‌ ಪ್ರಶಸ್ತಿ ಅಲ್ಲದೆ ಟೈಮ್‌ ಮ್ಯಾಗಸಿನ್‌ಗಾಗಿ ರಚಿಸಿದ ಮುಖಪುಟ ಅಮೆರಿಕಾದ ನ್ಯಾಷನಲ್‌ ಗ್ಯಾಲರಿ ಆಫ್‌ ಪೋಟ್ರೇಟ್‌ನಲ್ಲಿರುವುದು ಅವರ ಕಲೆಗೆ ಸಂದ ಉನ್ನತ ಗೌರವಗಳು. ಲಾಂಗ್‌ ಐಲೆಂಡ್‌ನಲ್ಲಿ ನೆಲೆಸಿದ್ದ ಮೋರ್ಟ್‌ ಡ್ರಕ್ಕರ್‌ ಅವರು, ಇದೇ 9ನೇ ಏಪ್ರಿಲ್‌ 2020ರಂದು ತಮ್ಮ 91ನೇ ವಯಸ್ಸಿನಲ್ಲಿ ವುಡ್‌ಬರಿಯಲ್ಲಿ ನಮ್ಮನ್ನಗಲಿದರು. (ಅಮೆರಿಕಾದಲ್ಲಿ ತಾಂಡವವಾಡುತ್ತಿದ್ದ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳು ಇವರಲ್ಲಿ ಕಾಣಿಸಿಕೊಂಡಿರಲಿಲ್ಲ) ಇದು ಅಪಾರ ಕಲಾ ಅಭಿಮಾನಿಗಳನ್ನು ದುಃಖಕ್ಕೆ ಈಡುಮಾಡಿತು. ಡಿ.ಸಿ.ಯ ಕ್ರಿಯೆಟಿವ್‌ ಹೆಡ್‌ ಮತ್ತು ಪ್ರಕಾಶಕ ಜಿಮ್‌ ಲೀ ಹೇಳುವಂತೆ ‘ಮೋರ್ಟ್‌ ಡ್ರಕ್ಕರ್‌ ಅವರು ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವ್ಯಂಗ್ಯ ಭಾವಚಿತ್ರಕಾರ, ಅವರ ಚಿತ್ರಗಳು ತಲೆ ತಲಾಂತರಗಳಲ್ಲೂ ಉಳಿಯಲಿದೆ’ ಎನ್ನುವುದು ಅತಿಶಯೋಕ್ತಿಯಲ್ಲ.